ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ; ಕಾಂಗ್ರೆಸ್ ನಿಂದ ಸರ್ಕಾರದ ವಿರುದ್ಧ ಫೋನ್ ಟ್ಯಾಪ್ ಆರೋಪ

ಶನಿವಾರ, 22 ಆಗಸ್ಟ್ 2020 (11:34 IST)
ಬೆಂಗಳೂರು : ಕೆಜಿ ಹಳ್ಳಿ,  ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೇಳಿಬರುತ್ತಿರುವ ಹಿನ್ನಲೆಯಲ್ಲಿ  ಕಾಂಗ್ರೆಸ್ ನಿಂದ ಸರ್ಕಾರದ ವಿರುದ್ಧ ಫೋನ್ ಟ್ಯಾಪ್ ಆರೋಪ ಮಾಡಿದೆ.

ಅನಗತ್ಯವಾಗಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಸಿಲುಕಿಸಲಾಗ್ತಿದೆ ಎಂದು ಕಾಂಗ್ರೆಸ್  ಆರೋಪ ಮಾಡಿದೆ. ಹೀಗಾಗಿ ಡಿಕೆ ಶಿವಕುಮಾರ್  ಫೋನ್ ಟ್ಯಾಪ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಡಿಕೆಶಿ ವಿಚಾರಣೆಗೆ ನೋಟಿಸ್ ನೀಡುವ ಮೊದಲೇ ಸಂಪತ್ ರಾಜ್ ಪರ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮ ಕಾರ್ಪೋರೇಟರ್ ಗಳು ಏನ್ ಮಾಡಿದ್ದಾರೆ? ಅವರಿಗೂ ಗಲಭೆಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಉದ್ದೇಶಪೂರ್ವಕವಾಗಿ ನಟಾರ್ಗೆಟ್ ಮಾಡ್ತಿದ್ದಾರೆ ಎಂದು ಬಿಂಬಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ