ಐತಿಹಾಸಿಕ ತೀರ್ಪನ್ನು ನಾವೆಲ್ಲರೂ ಸ್ವಾಗತಿಸೋಣ-ಬಿಎಸ್ ವೈ

ಶನಿವಾರ, 9 ನವೆಂಬರ್ 2019 (12:05 IST)
ಬೆಂಗಳೂರು: ವಿವಾದಿತ ಭೂಮಿ ಅಯೋಧ್ಯೆಯ ಕುರಿತು ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಿವಾದಿತ ಜಮೀನು ರಾಮಲಲ್ಲಾ ಪಾಲಾಗಿದೆ. ಸುಪ್ರೀಂಕೋರ್ಟ್ ನ ತೀರ್ಪನ್ನು ಸಿಎಂ ಬಿಎಸ್ ವೈ ಸ್ವಾಗತಿಸಿದ್ದಾರೆ.
ಐತಿಹಾಸಿಕ  ತೀರ್ಪನ್ನು ನಾವೆಲ್ಲರೂ ಸ್ವಾಗತಿಸೋಣ. ಯಾರೊಬ್ಬರ ಗೆಲುವು ಅಥವಾ ಸೋಲೆಂದು ಭಾವಿಸಬೇಡಿ. ಉದ್ವೇಗಕ್ಕೆ ಒಳಗಾಗಬೇಡಿ, ಯಾರೊಬ್ಬರೂ ವಿಜೃಂಭಿಸಬೇಡಿ.ಸಮಾಜದ ಸಾಮರಸ್ಯ ಕದಡದೇ, ಶಾಂತಿ ಸುವ್ಯವಸ್ಥೆ ಕಾಪಾಡಿ ಎಂದು ರಾಜ್ಯದ ಜನರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ