ರೈತನ ಮೇಲೆ ಅಧಿಕಾರಿಗಳಿಂದ ಸಾಮೂಹಿಕ ಹಲ್ಲೆ: ಐವರ ಮೇಲೆ ಎಫ್ ಐ ಆರ್

ಬುಧವಾರ, 31 ಅಕ್ಟೋಬರ್ 2018 (15:31 IST)
ಜಮೀನೊಂದರ ಸ್ಕೇಚ್ ತಯಾರಿಸಿಕೊಡಲು ವಿಳಂಬ ಮಾಡುತ್ತಿರುವ ಸರ್ವೆ‌ ಅಧಿಕಾರಿಗಳನ್ನ ಪ್ರಶ್ನಿಸಿದ ರೈತನ ಮೇಲೆ ಸರ್ವೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಕುಣಿಗಲ್  ನ ತಾಲೂಕಾ ಸರ್ವೆ ಇಲಾಖೆ ಯಲ್ಲಿ ಅಧಿಕಾರಿಗಳು ದರ್ಪ ತೋರಿದ್ದಾರೆ.  ಬೋರೇಗೌಡ ಎಂಬುವವರು ತಮ್ಮ ಜಮೀನಿನ ಸ್ಕೇಚ್ ತಯಾರಿಸಿ ಕೊಡಲು ಅರ್ಜಿ ಹಾಕಿ ಒಂದು ವರ್ಷ ಕಳೆದಿದೆ. ಬೋರೆಗೌಡ ತನ್ನ ತಮ್ಮನ ಮಗ ಚಿಕ್ಕಣ್ಣ ಗೌಡರ ಜೊತೆ ಬಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿದ್ದಾರೆ.

ಆಗ ಚಿಕ್ಕಣ್ಣಗೌಡ ಮೇಲಧಿಕಾರಿಗೆ ದೂರು ಕೊಡುವುದಾಗಿ ಹೇಳಿದ್ದಾನೆ. ಅಷ್ಟಕ್ಕೆ ಸಿಟ್ಟಿಗೆದ್ದ‌ ಸರ್ವೆ ಅಧಿಕಾರಿ ಸೇರಿ ಇತರ ಸಿಬ್ಬಂದಿಗಳೂ ಚಿಕ್ಕಣ್ಣ ಗೌಡನ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲಿದ್ದ ಇತರ ರೈತರು ಬಿಡಿಸಲು ಬಂದರೂ ಕ್ಯಾರೇ ಅನ್ನದೇ ಹಲ್ಲೆ ನಡೆಸಿದ್ದಾರೆ.  ಸರ್ವೆ ಅಧಿಕಾರಿ ಮಲ್ಲಿಕಾರ್ಜುನ್, ಸಿಬ್ಬಂದಿಗಳಾದ ನಂದೀಶ್, ರವಿಪ್ರಕಾಶ್, ಜಗದೀಶ್ ಹಾಗೂ ಪ್ರಕಾಶ್ ವಿರುದ್ದ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ