೪೦೦ ಹೊಡೆಯಲೇಬೇಕು ಅಂದ್ರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೊಸ ನೆಲೆ ಗಟ್ಟಿಗೊಳ್ಳಬೇಕಿದೆ. ಕಳೆದ ಬಾರಿ ಕರುನಾಡಿನಲ್ಲಿ ೨೫ ಸ್ಥಾನ ಗೆದ್ದ ಬಿಜೆಪಿಗೆ, ಈ ಕಡೆಗೆ ತೆಲಂಗಾಣ, ತಮಿಳುನಾಡಿನಲ್ಲಿ ಪಾರುಪತ್ಯ ಸಾಧಿಸೋದೇ ಕಷ್ಟವಾಗಿತ್ತು. ಆದ್ರೆ ಈ ಬಾರಿ ತಮಿಳುನಾಡು, ತೆಲಂಗಾಣದಲ್ಲೂ ಹೊಸ ಹೊಸ ಗೇಮ್‌ಪ್ಲಾö್ಯನ್‌ಗಳನ್ನು ಬಿಜೆಪಿ ಹೂಡ್ತಿದೆ.ಈ ಬಾರಿ ಬಿಜೆಪಿಯ ಸಂಪೂರ್ಣ ಗಮನವು ದಕ್ಷಿಣ ರಾಜ್ಯಗಳ ಕಡೆಗೆ ನೆಟ್ಟಿದೆ. ಇತ್ತಾ ಬಿಜೆಪಿಗೆ ಯಾರು ಹೆಚ್ಚು ಆಪ್ತರು ಆಗಬಹುದು ಅನ್ನೋದಕ್ಕೆ ಸೌತ್ ಸ್ಟೇಟ್ ಲೀಡರ್‌ಗಳ ಮಧ್ಯೆ ಬಿಗ್‌ಫೈಟ್ ಏರ್ಪಟ್ಟಿದೆ. ಇದಕ್ಕೆ ತೀರಾ ಹತ್ತಿರದ ಉದಾದರಣೆ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ದೆಹಲಿ ತಲುಪಿದ್ದ ವಿದ್ಯಮಾನ ಕಣ್ಣ ಮಂದಿದೆ. ಅದೇ ರೀತಿಯಾಗಿ ಮತ್ತೊಂದು ಕಡೆ ಟಿಡಿಪಿಯ ಚಂದ್ರಬಾಬು ನಾಯ್ಡು ಕೂಡ ಅಮಿತ್ ಶಾ ಮತ್ತು ಜೆ.ಪಿ ನಡ್ಡಾರನ್ನ ಭೇಟಿ ಮಾಡಿರೊದು ದಕ್ಷಿಣದ ರಾಜಕಾರಣದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ.