ಮಾಜಿ ಸಚಿವ ಎಂ ಬಿ ಪಾಟೀಲ್ ಕುಟುಂಬ ಸದಸ್ಯರ ಪೊನ್ ಕಾಲ್ ಹಿಸ್ಟರಿ ಕದ್ದಾಲಿಕೆಗೆ ಯತ್ನ..!

ಸೋಮವಾರ, 13 ಮಾರ್ಚ್ 2023 (20:32 IST)
ಕುಟುಂಬ ಸದಸ್ಯರ ಟೆಲಿಪೋನ್ ಕಾಲ್ ಹಿಸ್ಟರಿ ನೀಡದಂತೆ ನಿರ್ದೆಶನ ನೀಡಲು ಪೊಲೀಸ್ ಇಲಾಖೆಗೆ  ಮಾಜಿ ಸಚಿವ ಎಂ ಬಿ ಪಾಟೀಲ್ ಪತ್ರ ಬರೆದಿದ್ದಾರೆ.ರಾಜಕೀಯ ವಿರೋಧಿಗಳು ಕೆಟ್ಟ ಚಾಳಿಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿರುವ ಎಂ ಬಿ ಪಾಟೀಲ್ ಕಲ್ಬುರ್ಗಿ, ಬಾಗಲಕೋಟ, ಬೆಳಗಾವಿ ಜಿಲ್ಲೆಗಳಿಂದ ಕಾಲ್ ಹಿಸ್ಟರಿ ಪಡೆಯಲಾಗಿದೆ.ವೈಯಕ್ತಿಕ ಮಾಹಿತಿ ಕಸಿಯುವ ಯತ್ನ ನಡೆಯುತ್ತಿದೆ. ಈ ಹಿನ್ನೆಲೆ ತಮ್ಮ ಮತ್ತು ತಮ್ಮ ಪತ್ನಿ ಸೇರಿದಂತೆ ಐವರ ಕಾಲ್ ಹಿಸ್ಟರಿ  ನೀಡದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಸಹೋದರ, ವಿಧಾನಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್, ಪಿ ಆರ್ ಓ ಮಹಾಂತೇಶ್ ಬಿರಾದಾರ್,ಪುತ್ರ ಬಸನಗೌಡ ಪಾಟೀಲ್ ಪೋನ್ ಕಾಲ್ ಹಿಸ್ಟರಿ ನೀಡದಂತೆ ಸೂಚಿಸಲು ಎಂ.ಬಿ.ಪಾಟೀಲ್ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ