ಮಳೆಗೆ ಕೊಚ್ಚಿ ಹೋದ ಭತ್ತದ ಬೆಳೆ
ರಾಜ್ಯದಾದ್ಯಂತ ಮಳೆ ಮುಂದುವರೆಯುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಗೆ ಭತ್ತದ ಬೆಳೆ ಕೊಚ್ಚಿ ಹೋಗಿ ರೈತನ ಶ್ರಮ ನೀರು ಪಾಲಾಗಿದೆ. ದಾವಣಗೆರೆ ಹಿರೇತೊಗಲೇರಿ ಗ್ರಾಮದಲ್ಲಿ ಮಳೆ ಅವಾಂತರಕ್ಕೆ ರೈತರು ತತ್ತರಿಸಿದ್ದು, ಕೊಯ್ಲಿಗೆ ಬಂದಿದ್ದ 250ಕ್ಕೂ ಹೆಚ್ಚು ಪ್ರದೇಶದ ಭತ್ತ ಆಲಿಕಲ್ಲಿನ ಮಳೆಯ ಹೊಡೆತಕ್ಕೆ ಮಣ್ಣು ಪಾಲಾಗಿದೆ. ಎಕರೆಗೆ 40 ಚೀಲ ಭತ್ತವನ್ನ ನಿರೀಕ್ಷೆ ಮಾಡಿದ್ದ ರೈತನಿಗೆ ನಿರಾಸೆಯಾಗಿದೆ. ಮಳೆ ಬರದೆ ಇನ್ನೆರೆಡು ದಿನ ಕಳೆದಿದ್ದರೆ ಭತ್ತದ ಕೊಯ್ಲು ಮಾಡುತ್ತಿದ್ದರು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗಿದ್ದು ಅಧಿಕಾರಿಗಳೇ ಹಾನಿಯನ್ನು ಅಂದಾಜಿಸಿ ಸೂಕ್ತ ಪರಿಹಾರ ನೀಡಿ ಎಂದು ರೈತ ಪರಿಪರಿಯಾಗಿ ಮನವಿ ಮಾಡಿದ್ದಾರೆ.