ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ನಗರದ ಬಹುತೇಕ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ನಗರಣೆ ಮಾಡುವ ಸ್ಥಿತಿ ಉಂಟಾಗಿದೆ ಇದಕ್ಕೆ ಪಾಲಿಕೆ ಏನು ಕ್ರಮ ಕೈ ಗೊಂಡಿದೆ.ಇತ್ತೀಚಿಗೆ ಬೆಂಗಳೂರುನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ , ಪ್ರತಿ ಬಾರಿ ಮಳೆ ಬಂದ್ರು ಜನಜೀವನ ಅಸ್ತವ್ಯಸ್ಥಗೊಳ್ತಿದೆ, ನಿನ್ನೆ ಮದ್ಯಾಹ್ನ ಮಳೆಯ ಅಭರ ಜೊರಗೆ ಇತ್ತು, ನಿನ್ನೆ ಸುರಿದ ಬಾರಿ ಮಳೆಗೆ ಸಿಲಿಕಾನ್ ಸಿಟಿಯ ತಗ್ಗು ಪ್ರದೇಶದ ಮನೆಗಳಿಗೆ ಮೋರಿ ನೀರು ನುಗ್ಗಿ ರಾತ್ರಿ ಇಡೀ ಜನ್ರು ನಿದ್ದೆ ಇಲ್ದೆ ಜಾಗರಣೆ ಮಾಡುವ ಸ್ಥಿತಿ ಉಂಟಾಗಿದೆ.
ನಿನ್ನೆ ಸೂರಿದ ಬಾರಿ ಮಳೆಗೆ ಬೆಂಗಳೂರು ಅಕ್ಷರಸಹ ಮಳೆಯಿಂದ ಮುಳುಗೆದ್ದಿದೆ, ಮದ್ಯಾಹ್ನ ಕೇವಲ 45 ನಿಮಿಷ ಸುರಿದ ಮಳೆಯಲ್ಲಿ ನಗರದ ಮೆಜೆಸ್ಟಿಕ್ ರೈಲ್ವೇ ಅಂಡರ್‌ಪಾಸ್, ವಿಂಡ್ಸನ್ ಮ್ಯಾನರ್ ಬ್ರಿಡ್ಜ್, ಸೆವೆನ್ ಮಿಸಿಸ್ಟರ್ ಕ್ವಾಟ್ರಸ್ , ಕೆಅರ್ ಸರ್ಕಲ್ ಅಂಡರ್ ಪಾಸ್ ಗಳು ಜಲಾವೃತಗೊಂಡಿತ್ತು. ಮಂತ್ರಿಮಾಲ್ ಬಳಿ ರಸ್ತೆ ಕೆರೆಯಂತಾಗಿತ್ತು.ಇದರಿಂದ ಪಾಲಿಕೆ ನಗರದಲ್ಲಿರು 18 ಅಂಡರ್ ಪಾಸ್ ಗಳ ಮಾಹಿತಿ ಪಡೆದು ಸರಿ ಪಡಿಸಲು ಮುಂದಾದರೆ, ಇನ್ನೂ ಮೂರು ನಾಲ್ಕು ಅಂಡರ್ ಪಾಸ್ ಗಳು ಮಳೆಗಾಲ ಮುಗಿಯುವರೆಗೂ ಕಂಪ್ಲೀಟ್ ಬಂದ್ ಮಾಡಲು ಪಾಲಿಕೆ ಮುಂದಾಗಿದೆ.