ಯಡಿಯೂರಪ್ಪಗೆ ಶಾಕ್?: ಡಿಸಿಎಂ ಬೇಡ ಸಿಎಂ ಹುದ್ದೆ ಬೇಕೆಂದ ಬಿಜೆಪಿ ಮುಖಂಡ

ಸೋಮವಾರ, 29 ಜುಲೈ 2019 (14:35 IST)
ನಮಗೆ ಉಪಮುಖ್ಯಮಂತ್ರಿ ಹುದ್ದೆ ಬೇಡ. ನಮಗೇನಿದ್ದರೂ ಮುಖ್ಯಮಂತ್ರಿ ಸ್ಥಾನವೇ ಬೇಕು. ಹೀಗಂತ ಬಿಜೆಪಿ ಸಂಸದ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದು ಗೊತ್ತು, ಉರಳಿಸುವುದು ಗೊತ್ತು. ಮೈತ್ರಿ ಸರ್ಕಾರ ಅಷ್ಟೇ ಏಕೆ?  ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ಪ್ರಭಾವ  ಇದ್ದೇ ಇದೆ. ಹೀಗಂತ ಬಿಜೆಪಿ ಮುಖಂಡ ಪ್ರಭಾಕರ ಕೋರೆ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಕೋರೆ, ಬೆಳಗಾವಿ ತನ್ನದೇಯಾದ ಮಹತ್ವ ಹೊಂದಿದೆ. ಇಲ್ಲಿನ ರಾಜಕಾರಣಿಗಳಿಗೆ ಸರಕಾರ ರಚಿಸುವುದು ಗೊತ್ತು, ಉರಳಿಸುವುದು ಗೊತ್ತು ಎಂದರು. ಇನ್ನು ಬಿಜೆಪಿ ಎನ್ನುವುದು ಮಹಾ ಸಾಗರ ಇದ್ದ ಹಾಗೆ. ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತದೆ. ಇನ್ನು ಬೆಳಗಾವಿಯಲ್ಲಿ ಸಿಎಂ ಆಗುವಂತವರೂ ಇದ್ದಾರೆ. ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರದ ವಿಷಯ ಎಂದರು.

ಡಿಸಿಎಂ ಪಟ್ಟಕ್ಕೆ ಆಸೆ ಪಡುವ ರಾಜಕಾರಣಿಗಳು ಇಲ್ಲಿಲ್ಲ. ಅವಕಾಶ ಸಿಕ್ಕಾಗ ಇಲ್ಲಿನವರು ಸಿಎಂ ಹುದ್ದೆಗೆ ಎರುತ್ತಾರೆಯೇ ಹೊರತು‌ ನಮಗೆ ಡಿಸಿಎಂ ಬೇಡ ಎಂದರು. ರಾಜ್ಯದ ಜನರ ನಿರೀಕ್ಷೆಯಂತೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಜಿಲ್ಲೆಗೆ ನಾಲ್ಕು ಏಕೆ ಇನ್ನೊಂದು ಸಚಿವ ಸ್ಥಾನ ಕೊಟ್ರೂ ನಮಗೂ ಖುಷಿ ಇದೆ ಅಂತ ಪ್ರಭಾಕರ ಕೋರೆ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ