ಮೀನಿನ ಬಲೆಯಲ್ಲಿ ಸಿಲುಕಿಕೊಂಡ ವಿಷಸರ್ಪ: ಮುಂದೇನಾಯ್ತು ಗೊತ್ತಾ?

ಸೋಮವಾರ, 8 ಅಕ್ಟೋಬರ್ 2018 (18:11 IST)
ಮೀನಿನ ಬಲೆಯಲ್ಲಿ ನಾಗರ ಹಾವು ಸಿಲುಕಿಕೊಂಡಿತ್ತು. ಇದನ್ನು ನೋಡಿದ ಸ್ಥಳೀಯರು ಭಯಗೊಂಡಿದ್ದರು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ   ಮುಂಡಳ್ಳಿಯ ತಿರಗನಮನೆ ಶನಿಯಾರ ನಾಯ್ಕ ಎಂಬುವವರ ಮನೆಯಲ್ಲಿನ ಮೀನಿನ ಬಲೆಯಲ್ಲಿ ಸಿಕ್ಕಿಬಿದ್ದ ನಾಗರಹಾವನ್ನು ಸ್ಥಳೀಯರು ಬಲೆಯಿಂದ ಬಿಡಿಸಿ ಹಾವಿಗೆ ಜೀವದಾನ ನೀಡಿದ್ದಾರೆ. 

ಮೀನು‌ ಬಲೆಯಲ್ಲಿ ಸಿಕ್ಕಿಬಿದ್ದಿದ್ದು ತಪ್ಪಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದ ನಾಗರ ಹಾವಿಗೆ ಯಾವುದೇ ರೀತಿಯಲ್ಲಿ ಹಾನಿ ಪಡಿಸದೇ ನಯವಾಗಿ ಬಲೆಯಿಂದ ಬೇರ್ಪಡಿಸಲಾಯಿತು.

 ಹೂ ತೋಟದಲ್ಲಿ ದನಕರುಗಳು ಒಳ ಬರದಂತೆ ತಡೆಯಲು ಹಾಕಲಾಗಿದ್ದ  ಮೀನು ಬಲೆಗೆ ನಾಗರಹಾವು ರಾತ್ರಿ  ಸಿಲುಕಿಕೊಂಡಿತ್ತು. ಬಲೆಯಿಂದ ತಪ್ಪಿಸಿಕೊಳ್ಳಲು ರಾತ್ರಿ ಈಡೀ ಪ್ರಯತ್ನ ಪಟ್ಟು ಸುಸ್ತಾದ ನಾಗರ ಹಾವು ಮೈ ತುಂಬ ಗಾಯ ಮಾಡಿಕೊಂಡಿತ್ತು.

ತೋಟದ ಬಲೆ ಬೇಲಿಗೆ ಸಿಲುಕಿಕೊಂಡ ಹಾವನ್ನು ಕಂಡ ಶನಿಯಾರ ನಾಯ್ಕ ಕುಟುಂಬದವರು  ಹೌಹಾರಿದ್ದಾರೆ. ಬಲೆಯಲ್ಲಿ ಸಿಲುಕಿದ ಹಾವನ್ನು ಬಿಡಿಸುವ ಪ್ರಯತ್ನ ಮಾಡಿದರೂ ಫಲಕಾರಿಯಾಗಿಲ್ಲ. 

ಸ್ಥಳೀಯ ಉರಗ ತಜ್ಞ ಮಾದೇವ ನಾಯ್ಕ ಚಿತ್ರಾಪುರ ಅವರಿಗೆ ಮಾಹಿತಿ ನೀಡಿ ಹಾವಿನ ರಕ್ಷಣೆಗೆ ಆಗ್ರಹಿಸಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಮಾದೇವ ನಾಯ್ಕ ಬಲೆಯಲ್ಲಿ ಸಿಲುಕಿ ಗಾಯಗಳನ್ನು ಮಾಡಿಸಿಕೊಂಡ ನಾಗರ ಹಾವಿನ ಗಾಯಕ್ಕೆ ಅರಸಿಣ ಹಚ್ಚಿದರು.   ಬಲೆಯನ್ನು ಕತ್ತರಿಸಿ ಹಾವನ್ನು ಸುರಕ್ಷಿತವಾಗಿ ಹೊರತೆಗೆದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ