ಶಾಸಕರಿಗೆ ನಿದ್ರೆ ಮಾಡಲು ಚೇರ್ ಆಯ್ತು, ಈಗ ಟೀ, ಕಾಫಿ, ಕ್ಲಬ್ ವ್ಯವಸ್ಥೆ ಮಾಡಲು ಮುಂದಾದ ಯುಟಿ ಖಾದರ್

Krishnaveni K

ಗುರುವಾರ, 6 ಮಾರ್ಚ್ 2025 (14:44 IST)
ಬೆಂಗಳೂರು: ವಿಧಾನಸಭೆಯಲ್ಲಿ ಶಾಸಕರಿಗೆ ನಿದ್ರೆ ಮಾಡಲು ಚೇರ್ ವ್ಯವಸ್ಥೆ ಆಗಿದೆ. ಇದೀಗ ಸ್ಪೀಕರ್ ಯುಟಿ ಖಾದರ್ ಶಾಸಕರಿಗೆ ಟೀ, ಕಾಫಿ ಮತ್ತು ಹರಟೆ ಹೊಡೆಯಲು ಕ್ಲಬ್ ಸ್ಥಾಪಿಸುವ ಬಗ್ಗೆ ಮಾತನಾಡಿದ್ದಾರೆ.

ಶಾಸಕರಿಗೆ ಮಧ್ಯಾಹ್ನ ಕೆಲವು ಹೊತ್ತು ನಿದ್ರೆ ಮಾಡಲು ಅನುಕೂಲವಾಗುವಂತೆ ಸ್ಪೀಕರ್ ಈಗಾಗಲೇ ಆರಾಮ ಚೇರ್ ಗಳ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಇಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದು ಕೆಲವು ಕಂಪನಿಗಳ ಡೆಮೋ ಕುರ್ಚಿಯಷ್ಟೇ ಹೊರತು ದುಡ್ಡು ಕೊಟ್ಟು ತಂದಿದ್ದಲ್ಲ ಎಂದಿದ್ದರು.

ಇದೀಗ ಶಾಸಕರು ಸದನ ನಡೆಯುವಾಗ ಅನುಭವಿಸುವ ಸಮಸ್ಯೆಗಳ ಬಗ್ಗೆ ಹೇಳಿರುವ ಸ್ಪೀಕರ್, ಅವರ ಆರೋಗ್ಯವನ್ನೂ ನಾವು ನೋಡಬೇಕಲ್ವಾ? ಸದನದಲ್ಲಿ ವ್ಯವಸ್ಥೆ ಇಲ್ಲದೇ ಇರುವಾಗ ಊಟ, ಕಾಫಿಗೆ ಅಂತ ಹೊರಗೆ ಹೋಗ್ತಾರೆ. ಹೋಗಿ ಬರುವಾಗ ತಡವಾಗ್ತದೆ ಎಂದು ಹೇಳಿದ್ದಾರೆ.

ಈ ಕಾರಣಕ್ಕೆ ಈಗ ವಿಧಾನಸೌಧದಲ್ಲೇ ಇವೆಲ್ಲದಕ್ಕೂ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಶಾಸಕರ ಕ್ಲಬ್ ಸ್ಥಾಪಿಸಬೇಕಾಗಿದೆ ಎಂದೂ ಹೇಳಿದ್ದಾರೆ. ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಹರಟೆ ಹೊಡೆಯಲು, ತಮ್ಮ ಕುಶಲೋಪರಿ ನಡೆಸಲು ಕ್ಲಬ್ ಇದೆ. ಶಾಸಕರಿಗೂ ಅದರ ಅಗತ್ಯವಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ