ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಶನಿವಾರ, 5 ನವೆಂಬರ್ 2022 (17:34 IST)
ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಮಚಂದ್ರಾಪುರದ ಖಾಸಗಿ ಶಾಲೆಯಲ್ಲಿವೊಂದರಲ್ಲಿ ನಡೆದಿದೆ. ಆದ್ರೆ ಈಗ ಶಾಲೆಯಲ್ಲಿ ಬಾಲಕಿ ಸಾವಾನಾಪ್ಪಿರುವ ಕೊನೆ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಒಂದು ಮೂವತ್ತರ ಸೂಮಾರಿಗೆ ತಮ್ಮನ ಹೊರಗೆ ಕರೆದುಕೊಂಡು ಬಂದಿದ್ದ ನಿಶಿತಾ ತಮ್ಮನನ್ನು ಅಜ್ಜಿ ಜೊತೆಗೆ ಕಳಿಸಿದ್ರು.ನಂತರ ಮತ್ತೆ ಶಾಲೆಯ ಒಳಗೆ ನಿಶಿತಾ ಹೋಗಿದ್ದಾರೆ.ಬಳಿಕ ಒಂದು ಐವತ್ತರ ಸುಮಾರಿಗೆ ಮತ್ತೆ ಶಾಲೆಯಲ್ಲಿ ನಿಶಿತಾ ಕುಸಿದ್ದಿದ್ದಾರೆ.ಬಳಿಕ ಶಾಲೆಗೆ ತಾಯಿಯನ್ನು ಕರೆಸಲಾಗಿದೆ.ನಂತರ ಶಾಲೆ ಸಿಬ್ಬಂದಿ ನಿಶಿತಾಳನ್ನ  ಶಾಲೆಯಿಂದ ಹೊರಗೆ ಕರೆತಂದಿದ್ದಾರೆ.ಸ್ಕೂಟರ್ ಒಂದರಲ್ಲೆ ಹತ್ತಿರದ ಖಾಸಗಿ ಅಸ್ಪತ್ರೆಗೆ ಕರೆದುಕೊಂಡು ತೆರಳಿದ್ದಾರೆ.ಅಲ್ಲಿ ಜೀವ ಇಲ್ಲಾ ಎಂದ ಹೇಳಿದ ಬಳಿಕ ಮತ್ತೆ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಅಲ್ಲಿಯೂ ಬಾಲಕಿ ಅಸ್ಪತ್ರೆಗೆ ಬರುವುದಕ್ಕೆ ಮೊದಲೇ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ