ಬೆಂಗಳೂರಿನ ಲಾಯರ್ಸ್ ಗುಡ್ ಲಾಯರ್ಸ್ ಎಂದು ಹಾಡಿಹೊಗಳಿದ ಸಿಎಂ
ವಕೀಲರ ಭವನ 5,6,7 ಮಹಡಿ ಉದ್ಘಾಟನೆಯ ಕಾರ್ಯಕ್ರಮ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆಯಿತು. ಸಿಎಂ ಬೊಮ್ಮಾಯಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಇವತ್ತು ನಾವೇಲ್ಲರು ಸೇರಿ ವಕೀಲರ ಭವನ ಉದ್ಘಾಟನೆ ಮಾಡಿದ್ದೇವೆ.ಈ ಭವನಕ್ಕೆ ಕುವೆಂಪು ಅವರ ಹೆಸರು ಇಟ್ಟಿದ್ದು ನನಗೆ ಸಂತೋಷವಾಗಿದೆ.ನೀವು ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೆ ಒಮ್ಮೆ ಕುವೆಂಪು ಅವರನ್ನ ನೆನದು ನಿರ್ಧಾರ ಕೈಗೊಳ್ಳಿ ಒಳ್ಳೆದು ಆಗುತ್ತದೆ.2000 ಹೆಚ್ಚು ಮಹಿಳಾ ವಕೀಲರು ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿ ತುಂಬಾ ಸಂತೋಷ ವಾಯಿತು .ಡಿಜೆಟೆಲ್ ಲೈಬ್ರರಿಗೆ ಅನೊಮೊದನೆ ಕೊಡುತ್ತೇವೆ.ನ್ಯಾಯ ಸಿಗಬೇಕಾದರೆ ವಕೀಲರ ಬೇಕೆ ಬೇಕು.ವಕೀಲರು ಕ್ಲೈಂಟ್ ಗೆ ನ್ಯಾಯಬದ್ದವಾಗಿರಬೇಕು ಅಷ್ಟೇ ನ್ಯಾಯಾಕ್ಕೂ ಅಷ್ಟೇ ಬದ್ದವಾಗಿರಬೇಕು.ಬೆಂಗಳೂರಿನ ಲಾಯರ್ಸ್ ಗುಡ್ ಲಾಯರ್ ಲಾ ಚೆಂಬರ್ ಅವಶ್ಯಕತೆ ಎಂದು ಹೇಳಿದ್ದಾರೆ.ಅದಕ್ಕೆ ಸೂಕ್ತ ಸ್ಥಳ ನೋಡಿ ಬರುವಂತಹ ಬಜೇಟ್ ನಲ್ಲಿ ಅನುಮತಿ ಕೊಡುತ್ತೇವೆ.ಲಾ ಪ್ರೊಟೆಕ್ಷನ್ ಆಕ್ಟ್ ಈ ಆಕ್ಟ್ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.ಇನ್ನೂ ಕಾರ್ಯಕ್ರಮದಲ್ಲಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ,ವಕೀಲರ ಸಂಘದ ರಾಜ್ಯಾಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ,ಲೋಕಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್,ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೈಕೋರ್ಟ್ ಉಪಸ್ಥಿತರಿದ್ದರು.