ನಗರದಲ್ಲಿ ಮಳೆ ಮುಂಜಾಗ್ರತೆಗೆ ಸಜ್ಜಾದ ಪಾಲಿಕೆ

ಭಾನುವಾರ, 18 ಜೂನ್ 2023 (19:25 IST)
ಒಂದು ಕಡೆ ನಗರದಲ್ಲಿ ಮಳೆ ಆರ್ಭಟ ಜೋರಾಗಿದೆ.ಮತ್ತೊಂದು ಕಡೆ ಪಾಲಿಕೆಯಲ್ಲಿ ದಿನಕ್ಕೊಂದು ಮೀಟಿಂಗ್ ನಡೆಸಿ ನಗರದ ಎಂಟು ವಲಯಗಳಲೂ ಮಳೆಯ ಸಮಸ್ಯೆ ಗಳಿಗೆ ತಕ್ಷಣ ಪಾಲಿಕೆ ಅಧಿಕಾರಿಗಳು ಧಾವಿಸಿ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ವಲಯಗಳಲ್ಲೂ ಕಂಟ್ರೋಲ್‌ ರೂಮ್ ತೆರೆಸಿದ್ದಾರೆ.ಜೊತೆಗೆ ಮಳೆಯಿಂದಾಗಿ ನಗರದಲ್ಲಿ  ಯಾವುದೇ ಅಹಿತಕರ ಘಟನೆಗಳು ನಡೆಯದಿರಲು ಅಧಿಕಾರಿಗಳ ಜೊತೆ ದಿನಕ್ಕೊಂದು ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತೀದ್ದಾರೆ.
 
 ನಗರದಲ್ಲಿ ಮೇ.21 ರಂದು ಸುರಿದ ಭಾರಿ‌ ಮಳೆಗೆ ನಗರದ ಕೆ.ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಭಾನು ರೇಖಾ‌ ಎಂಬ ಮಳೆ ನೀರಿಗೆ ಕೊಚ್ಚಿ ಸಾವನ್ನೊಪ್ಪಿರುತ್ತಾಳೆ ಈ ಘಟನೆಗೆ ಸಂಬಂದಿಸಿದ ಕೂಡಲೇ ನಗರದ ಎಲ್ಲಾ ಅಂಡರ್ ಪಾಸ್ ಗಳ ವರದಿಯನ್ನು ಕೇಳಿದ್ದ ಪಾಲಿಕೆ 41 ಅಂಡರ್ ಪಾಸ್ ಗಳ ವರದಿ ನೋಡಿ ಮತ್ತು ಅಲ್ಲಿನ ಸ್ಥಿತಿ ಗತಿಯ ಬಗ್ಗೆ ಪರೀಶಿಲಿಸಿ, ನಗರದ ಎಲ್ಲಾ ಅಂಡರ್ ಪಾಸ್ ಗಳಿಗೆ ವೆಬ್ ಕ್ಯಾಮರಾ, ಸಿಸಿಟಿವಿ,ಲೈಟ್ ಜೊತೆಗೆ ಮಳೆ ಸರಿದಾಗ ಎಷ್ಟು ಮೀಟರ್ ಮಳೆ ಯಾಗಿದೆ ಅಂಡರ್ ಪಾಸ್ ನ ಸಾಮರ್ಥ್ಯ ತಿಳಿಯಲು  ಮೀಟರ್ ಗೇಜನ್ನು ಅಳವಡಿಸಲು ಬಿಬಿಎಂಪಿ  ಸಜ್ಜಾಗಿದೆ.
 
ಕಳೆದ ಭಾರಿ ಸುರಿದ ಮಳೆಗೆ ಬೆಂಗ್ಳೂರ್ ನಗರದಲ್ಲಿ 2 ಜೀವಗಳು ಬಲಿಯಾಗಿತ್ತು.ಇದರಿಂದ ಪಾಲಿಕೆಯ ಮೇಲೆ ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು,ಈ ನಿಟ್ಟಿನಲ್ಲಿ   ಮುಂಬರುವ ಮಳೆಗೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎಂದು ಪಾಲಿಕೆ ಎಚ್ಚರಿಕೆ ವಹಿಸಿದೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ