ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಚಾರಿ ನಿರೀಕ್ಷರ ಹುದ್ದೆ ಕೊಡಿಸುವುದಾಗಿ ವಂಚನೆ

ಶನಿವಾರ, 16 ಅಕ್ಟೋಬರ್ 2021 (21:48 IST)
ಬೆಂಗಳೂರು: ಸಾರಿಗೆ ನಿಗಮದಲ್ಲಿ ಉದ್ಯೋಗ ಕೊಡಿಸುವುದಾಗಿ ನೂರಾರು ಮಂದಿಯಿಂದ ಕೋಟ್ಯಾಂತರ ರೂ. ವಂಚಿಸಿದ ಇಬ್ಬರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಹಗರಿಬೊಮ್ಮನಹಳ್ಳಿಯ ಮಂಜುನಾಥ್ (45) ಹಾಗೂ ಆತನ ಗೆಳೆಯ ಅನಿಲ್ (41) ಬಂಧಿತ ಆರೋಪಿಗಳು.
ಮಂಜುನಾಥ್ ವಂಚಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದ. ಈತ ವಂಚಿಸಲೆಂದೇ ಪ್ರೀಜಾ ಕಾರೊಂದನ್ನು ಖರೀದಿಸಿ ಅದಕ್ಕೆ ಕರ್ನಾಟಕ ಸರ್ಕಾರ ಎಂಬ ಫಲಕ ಹಾಕಿಕೊಂಡು ರಾಜ್ಯದೆಲ್ಲೆಡೆ ಸುತ್ತುತ್ತಿದ್ದ. ಈ ವೇಳೆ ಕಲುಬುರಗಿ, ರಾಯಚೂರು, ಬಳ್ಳಾರಿ, ಗದಗ್ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಅವರಿಗೆ ಕೆಎಸ್‍ಆರ್ ಟಿಸಿ ಟ್ರಾಫಿಕ್ ಇನ್ ಸ್ಪೆಕ್ಟರ್ ಉದ್ಯೋಗ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ಅವರಿಂದ ಹಣ ವಸೂಲಿ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ. ಇದುವರೆಗೂ ಸುಮಾರು 500 ಮಂದಿಗೆ ಇದೇ ರೀತಿ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ. 
ಸುಮಾರು 10ರಿಂದ 15 ಕೋಟಿ ರೂ. ವಂಚಿಸಿರಬಹುದೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರಿಯೋ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ