ಬಹುನಿರೀಕ್ಷೆಯ ನಂದಿಬೆಟ್ಟ ರೋಫ್ ವೇ ಕನಸು ನನಸು..!

ಗುರುವಾರ, 9 ಮಾರ್ಚ್ 2023 (17:48 IST)
ಕೆಲಸದ ಒತ್ತಡದ ನಡುವೆ ಮನಸಿಗೆ ನೆಮ್ಮದಿ ಪಡೆಯಲು ಉತ್ತಮ ಪ್ರವಾಸ ಮುಖ್ಯ ಹಾಗಗೀ ಜನ ಹೆಚ್ಚಾಗಿ ಕುಟುಂಬ ಸಮೇತ ತಮ್ಮ ನೆಚ್ಚಿನ ತಾಣಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ ಹಾಗಾಗೀ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರನ್ನು  ಇನ್ನಷ್ಟು ಸೆಳೆಯಳು ಪ್ರವಾಸೋದ್ಯಮ ಇಲಾಖೆ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ,ಬಹುನಿರೀಕ್ಷೆಯ ನಂದಿಬೆಟ್ಟ ರೋಪ್ವೇ ಕನಸನ್ನು ನನಸುಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈ ಸಂಬಂಧ, ನಂದಿ ಬೆಟ್ಟದಲ್ಲಿ ಪ್ಯಾಸೆಂಜರ್ ರೋಪ್ವೇ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್ವೇ ಪ್ರೈವೇಟ್ ಲಿಮಿಟೆಡ್ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.

ನಗರದಲ್ಲಿ ಪ್ರವಾಸೋದ್ಯಮದ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಹೆಚ್ಚಿಸಲು ಇಲಾಖೆ ಮುಂದಾಗಿದ್ದು. ನಗರದ ಪ್ರಮುಖ ಪ್ರವಾಸಿ ಸ್ಥಳಗಳಿಗೆ 2.93 ಕಿ.ಮೀ. ಉದ್ದದ ರೋಪ್-ವೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ನಂದಿಬೆಟ್ಟಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬಹುದು ಹಾಗೂ  ರೋಪ್-ವೇ ನಿರ್ಮಿಸಿ ಪ್ರವಾಸಿಗರನ್ನು ತಪ್ಪಲಿನಿಂದ ಮೇಲಕ್ಕೆ ಕರೆದೊಯ್ಯುವ ಉದ್ದೇಶವಿದೆ ಇದರಿಂದಾಗಿ ಪ್ರವಾಸಿಗರ  ಸಂಖ್ಯೆಯಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಹಾಗೆ ಬೆಟ್ಟದ ತಳಭಾಗ ಹಾಗೂ ಮೇಲ್ಭಾಗ ಸೇರಿ ಎರಡೂ ಕಡೆ ಲ್ಯಾಂಡಿಂಗ್ ಸ್ಟೇಷನ್  ಇರುವಂತೆ ಯೋಜನೆ ರೂಪಿಸಲಾಗಿದೆ.ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್ವೇ ಅಭಿವೃದ್ಧಿಪಡಿಸುವ ಈ ಯೋಜನೆಗೆ 93.40 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ಸುಮಾರು 2.93 ಕಿ.ಮೀ. ರೋಪ್ವೇ ಅಭಿವೃದ್ಧಿಪಡಿಸಲಾಗುತ್ತದೆ .

ಐತಿಹಾಸಿಕ ತಾಣ ಮತ್ತು ಪಾರಂಪರಿಕ ಸ್ಮಾರಕಗಳಿಗೆ ನಂದಿ ಬೆಟ್ಟ ನೆಲೆಯಾಗಿದೆ. ಟ್ರಕ್ಕಿಂಗ್, ಸೈಕ್ಲಿಂಗ್ ಮತ್ತು ಪ್ಯಾರಾಗ್ಲೈಡಿಂಗ್ನಂತಹ ಸಾಹಸ ಕ್ರೀಡೆಗಳಿಗೂ ಪ್ರಸಿದ್ಧಿ ಪಡೆದಿರೋ ನಂದಿಬೆಟ್ಟ  ಪರಿಸರ ಸ್ನೇಹಿ ಸಾರಿಗೆ ಸೌಲಭ್ಯ ಅನುಕೂಲದ ಅಗತ್ಯವಿದೆ. ಇದರಿಂದ ಅಲ್ಲಿಗೆ ತಲುಪುವ ಸಮಯ ಉಳಿತಾಯವಾಗಲಿದೆ. , ಇನ್ನು ಇದರಲ್ಲಿ 18 ಟವರ್ಗಳು ನಿರ್ಮಾಣವಾಗಲಿದೆ. ಇದರ ಜೊತೆಗೆ ರೆಸ್ಟೋರೆಂಟ್, ಕೆಫೆ, ಆಹಾರ ಮಳಿಗೆ, ಇತರೆ ಮಳಿಗೆಗಳನ್ನು ನಿರ್ಮಿಸಲು ಅವಕಾಶವಿರಲಿದೆ. ರೋಪ್-ವೇನಲ್ಲಿ 50 ಕ್ಯಾಬಿನ್ಗಳಿರಲಿದ್ದು, ಪ್ರತಿಯೊಂದರಲ್ಲಿ 10 ಮಂದಿ ಪ್ರಯಾಣಿಸಬದಾಗಿದೆ.ಒಟ್ಟಾರೆ ಯಾಗಿ ಹೇಳೋದಾದ್ರೆ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ನಂದಿ ಬೆಟ್ಟವನ್ನು ಸೇರಿಸುವುದಕ್ಕೆ ಪ್ರವಾಸೋದ್ಯಮ ಇಲಾಕೆ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿರೋದು ಕರ್ನಾಟಕದ ಜನತೆಗೆ ಸಂತಸ ತಂದಿದೆ .

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ