ವಿದ್ಯುತ್ ದರ ಕಡಿಮೆ ಆಗಲ್ಲ- ಸಿಎಂ‌

ಭಾನುವಾರ, 18 ಜೂನ್ 2023 (21:00 IST)
ವಿದ್ಯುತ್ ದರ ಹೆಚ್ಚಳ ಸೇರಿದಂತೆ ಎಫ್‌ಕೆಸಿಸಿಐ ಬಂದ್ ಗೆ ನಿರ್ಧಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,ಎಫ್‌ಕೆಸಿಸಿ ನವರಿಗೆ ಇಂಧನ ಅಧಿಕಾರಿಗಳು ಕರೆಸಿ ಮಾತಾಡಿದಾರೆ.ಮುಂದಿನ ತಿಂಗಳಿಂದ ಸಹಜ ಆಗಲಿದೆ, ಈಗ ಎರಡು ತಿಂಗಳ ದರ ಒಟ್ಟಿಗೇ ಹಾಕಿದಾರೆ.ಹಾಗಾಗಿ ಅವರಿಗೆ ವಿದ್ಯುತ್ ದರ ಭಾರವಾಗಿ ಕಾಣಿಸ್ತಿದೆ.ವಿದ್ಯುತ್ ದರ ಕಡಿಮೆ ಆಗಲ್ಲ ಎಂದು ಸಿಎಂ ಹೇಳಿದ್ದು,ನಾನು ಮತ್ತೊಮ್ಮೆ ಎಫ್‌ಕೆಸಿಸಿಐ ನವರನ್ನ ಕರೆದು ಮಾತಾಡ್ತೀನಿ ಎಂದು  ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಆಂಧ್ರಪ್ರದೇಶದ ಜತೆ ಮಾತಾಡ್ತಿದೀವಿ, ಅವ್ರು ಅಕ್ಕಿ ಸಪ್ಲೈ ಮಾಡ್ತೀವಿ ಅಂದಿದಾರೆ.ತೆಲಂಗಾಣ ಸರ್ಕಾರ ಆಗಲ್ಲ ಅಂದಿದಾರೆ.ಛತ್ತೀಸ್‌ಗಡ ದವ್ರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡ್ತೀವಿ ಅಂದಿದಾರೆ.ನಮ್ಮ ರಾಜ್ಯದಲ್ಲಿ ಅಕ್ಕಿ ಇಲ್ಲ, ಅಕ್ಕಿ ಇದ್ರೆ ಕೊಡಿಸಿ ನೀವೇ ಎಂದು ಸಿಎಂ ಹೇಳಿದ್ದು,ರಾಯಚೂರಿನಲ್ಲಿ ಸೋನಾ ಮಸೂರಿ ಇರೋದು, ಅದು ಒಂದು ಕೆಜಿಗೆ ಕೆಜಿಗೆ 55 ರೂ,ರಾಜ್ಯದ ರೈತರಿಂದ ಅಕ್ಕಿ ಖರೀದಿಸಲ್ಲ ಅಂತ ಸಿಎಂ ಸುಳಿವು ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ