Udupi dog viral video: ಬೈಕ್ ಗೆ ನಾಯಿ ಕಟ್ಟಿ ಎಳೆದೊಯ್ದ ಮಾಲಿಕನ ವಿರುದ್ಧ ಭಾರೀ ಆಕ್ರೋಶ
ಉಡುಪಿಯ ಬೈಂದೂರು ಬಳಿ ರಸ್ತೆಯಲ್ಲಿ ಮಾಲಿಕ ತನ್ನ ಬೈಕ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹಿಂದೆ ಬರುತ್ತಿದ್ದ ಕಾರು ಸವಾರರೊಬ್ಬರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕೆಲವು ಹೊತ್ತು ಓಡಿಕೊಂಡೇ ಹಿಂದೆ ಬರುವ ನಾಯಿ ಬಳಿಕ ಸುಸ್ತಾಗಿ ಕೆಳಕ್ಕೆ ಬೀಳುತ್ತದೆ. ಹಾಗಿದ್ದರೂ ಕರುಣೆಯೇ ಇಲ್ಲದೇ ಮಾಲಿಕ ಬೈಕ್ ಚಲಾಯಿಸುತ್ತಾನೆ. ಹೀಗಾಗಿ ನಾಯಿ ರಸ್ತೆಯಲ್ಲಿ ಬಿದ್ದ ಸ್ಥಿತಿಯಲ್ಲೇ ಮುಂದೆ ಸಾಗುತ್ತದೆ.
ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಇದೀಗ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.