ಸಾರಿಗೆ ಸಿಬ್ಬಂದಿ, ಅಧಿಕಾರಿಗಳಿಗೆ ಯುನಾನಿ, ಹೋಮಿಯೋಪತಿ ಔಷಧ
ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ರೋಗ ನಿರೋಧಕ ಔಷಧಿ ವಿತರಣೆ ಮಾಡಲಾಗಿದೆ.
ಕೋವಿಡ್-19 ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯುನಾನಿ ಔಷಧಿಯಾದ ಆರ್ಕೆ ಅಜೀಬ್, ಆಯುರ್ವೇದ ಔಷಧಿ ಷಂಶಮನಿ ವಾಟಿ ಮತ್ತು ಹೋಮಿಯೋಪತಿ ಔಷಧಿ ಆರ್ಸೆನಿಕ ಆಲ್ಬಮ್ ಔಷಧಿಗಳನ್ನು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಉಚಿತವಾಗಿ ವಿತರಿಸಲಾಯಿತು.