ಹೆಂಡತಿ ತವರು ಮನೆ ಹೋಗಿದ್ದಕ್ಕೆ ಸೆಲ್ಫಿ ವಿಡಿಯೋದಲ್ಲಿ ಗಂಡ ಮಾಡಿದ್ದೇನು?

ಮಂಗಳವಾರ, 14 ಜನವರಿ 2020 (17:39 IST)

ಲವ್ ಮಾಡಿ ಮದುವೆಯಾದವಳು ತವರು ಮನೆ ಸೇರಿದ್ದಕ್ಕೆ ಗಂಡನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.
 

ಐದಾರು ವರ್ಷಗಳಿಂದ ಲವ್ ಮಾಡಿದ ಭವ್ಯಶ್ರೀ ಜೊತೆಗೆ ರಂಗಸ್ವಾಮಿ ಇಷ್ಟಪಟ್ಟು ಮದುವೆಯಾಗಿದ್ದನು. ಮದುವೆ ನಂತರ ಕೌಟುಂಬಿಕ ಕಲಹಗಳು ಶುರುವಾಗಿವೆ.

ಇದರಿಂದಾಗಿ ಭವ್ಯಶ್ರೀ ತವರು ಮನೆ ಸೇರಿದ್ದಳು. ಪತ್ನಿ ವಾಪಸ್ ಬರದೇ ಇದ್ದದ್ದರಿಂದ ಮನನೊಂದ ಪತಿ ರಂಗಸ್ವಾಮಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ರಂಗಸ್ವಾಮಿಯನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ