ಸಾವಿರಾರು ಲೀಟರ್ ಮದ್ಯ ರಸ್ತೆ ಮೇಲೆ ಸುರಿದದ್ದು ಏಕೆ?

ಶನಿವಾರ, 24 ನವೆಂಬರ್ 2018 (19:47 IST)
ರಾಜ್ಯ ಗಡಿ ಭಾಗವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮದ್ಯದ ಹೊಳೆ ಹರಿಯಿತು. ವಿವಿಧ ಬ್ರ್ಯಾಂಡ್ ನ ಸಾವಿರಾರು ಲೀಟರ್ ಮದ್ಯ ರಸ್ತೆ ಮೇಲೆ ಸುರಿಸಲಾಯಿತು. 

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಬಕಾರಿ ಇಲಾಖೆಯವರು ಜಿಲ್ಲೆಯಾದ್ಯಂತ ದಾಳಿ ನಡೆಸಿ ವಶಪಡಿಸಿಕೊಂಡ 4600 ಲೀಟರ್ ಗೋವಾ ಅಕ್ರಮ ಮದ್ಯವನ್ನು, ಕಾರವಾರ ಗಡಿಯಲ್ಲಿ ನಾಶ ಪಡಿಸಲಾಯಿತು. ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಮದ್ಯವನ್ನು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಬೇರೆ ಬೇರೆ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆಯವರು ವಶ ಪಡಿಸಿಕೊಂಡಿದ್ದರು. 

ಬೇರೆ ಬೇರೆ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ  ಈ ಮದ್ಯವನ್ನು  ನಾಶ ಪಡಿಸಲಾಯಿತು. ಗೋವಾದಲ್ಲಿ ತಯಾರಿಸಲಾಗಿರುವ ಬಗ್ಗೆ ಲೇಬಲ್ ಹೊಂದಿರುವ ನಕಲಿ ಮದ್ಯವನ್ನು ರಾಜ್ಯಕ್ಕೆ ಸಾಗಿಸುವ ಮೂಲಕ ಇಲ್ಲಿನ ‌ಜನರ ಆರೋಗ್ಯ ಹಾಳು‌ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಆದ್ದರಿಂದ ಗೋವಾದ ಅಕ್ರಮ‌ ಮದ್ಯವನ್ನು ಯಾರು ಕೂಡ ಸೇವಿಸಬಾರದು ಎಂದು ಅಬಕಾರಿ ಇಲಾಖೆ ಡಿಸಿ ಎಲ್ ಮಂಜುನಾಥ ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ