ಇದು ಇಂದಿರಾ ಕ್ಯಾಂಟಿನ್ ಅಲ್ಲ: ಅಮ್ಮ ಕ್ಯಾಂಟಿನ್
ಸೋಮವಾರ, 16 ಜುಲೈ 2018 (15:56 IST)
ಅಲ್ಲಿ ಹತ್ತು ರೂಪಾಯಿಗೆ ಬೆಳಗಿನ ಉಪಹಾರ , ಮದ್ಯಾಹ್ನದ ಊಟ ಸಿಗುತ್ತೆ. ಅಯ್ಯೋ ನೀವು ಇಂದಿರಾ ಕ್ಯಾಂಟಿನ್ ಬಗ್ಗೆ ಹೇಳಿತಾ ಇದ್ದಿರಾ ಅಂತ ಕೇಳಿದ್ರೆ ನಿಮ್ಮ ಊಹೆ ತಪ್ಪು, ಆದರೆ ಇದು ಇಂದಿರಾ ಕ್ಯಾಂಟೀನ್ ಅಲ್ಲ, ಅಮ್ಮನ ನೆನಪಿನ ಬುತ್ತಿ . ಇದರ ಹಿಂದೆ ವಿಶೇಷ ಕಥೆಯೇ ಇದೆ. ಮುಂದೆ ಓದಿ.
ಇದರ ಹೆಸರು ಅಮ್ಮ ಕ್ಯಾಂಟೀನ್. ಹಸಿದವರಿಗಾಗಿ ಇದರ ಧ್ಯೇಯ ವಾಕ್ಯ. ಸಾಲುಗಟ್ಟಿ ನಿಂತ ಜನ . ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಈ ಚಿತ್ರಣ ಕಂಡುಬರುತ್ತಿದೆ. ರಾಜ್ಯ ಸರಕಾರ ರಾಜ್ಯವನ್ನು ಹಸಿವು ಮುಕ್ತ ಕರ್ನಾಟಕ ಮಾಡಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದ್ರು ಕಡು ಬಡವರು ಇನ್ನು ಅನ್ನವಿಲ್ಲದೇ ಹಸಿವಿನಿಂದ ಅನ್ನಕ್ಕಾಗಿ ಪರದಾಡುವಂತಾಗಿದೆ . ಈಗಾಗಲೇ ರಾಜ್ಯ ಸರಕಾರ ಬಡವರ ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಂಟಿನ್ ಆರಂಭಿಸಿದೆ . ಸರಕಾರ ಕೂಡ ಕಡಿಮೆ ದರಕ್ಕೆ ಅನ್ನ ನೀಡಿ ಆಶ್ರಯವಾಗುತ್ತಿದೆ . ಶಹಾಪುರನಲ್ಲಿ ಸರಕಾರದಿಂದ ಆಗದ ಕೆಲಸವನ್ನು ಖಾಸಗಿ ವ್ಯಕ್ತಿಗಳು ಮಾಡುತ್ತಿದ್ದಾರೆ. ಶಹಾಪುರನಲ್ಲಿ ಇನ್ನು ಇಂದಿರಾ ಕ್ಯಾಂಟಿನ್ ಆರಂಭವಾಗಿಲ್ಲ . ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಚರಬಸವೇಶ್ವರ ಕಮಾನ್ ಹತ್ತಿರ ಮಣಿಕಂಠ ಅಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಮ್ಮನ ನೆನಪಿಗಾಗಿ ಗುರು ಮಣಿಕಂಠನ ಅವರು ಅಮ್ಮಳಾದ ಲಕ್ಷ್ಮೀ ಅವರ ಪುಣ್ಯಸ್ಮರಣೆ ದಿವಸ ಅಮ್ಮ ಕ್ಯಾಂಟಿನ್ ಆರಂಭಿಸಿದ್ದಾರೆ . ಅವರ ನೆನಪಿಗಾಗಿ ಹಸಿದವರಿಗೆ ಅನ್ನ ನೀಡುವ ಸಂಕಲ್ಪ ತೊಟ್ಟಿದ್ದಾರೆ . ಜನ ಇಲ್ಲಿಗೆ ಬಂದು ತಮ್ಮ ಹಸಿವನ್ನ ನೀಗಿಸಿಕೊಂಡು ಹೋಗುತ್ತಿದ್ದಾರೆ.
ಜನ್ಮದಾತಳ ಸವಿ ನೆನಪಿಗಾಗಿ ಬಡ ಜನರ , ಹಳ್ಳಿಗಳಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಹಸಿವನ್ನು ನಿಗಿಸುವ ಕೆಲಸ ಮಾಡುತ್ತಿದ್ದಾರೆ . ಕ್ಯಾಂಟಿನ್ ನಲ್ಲಿ ಉಪಹಾರ ಹಾಗೂ ಊಟವನ್ನು ಕಡಿಮೆ ದರಕ್ಕೆ ನೀಡಲಾಗುತ್ತಿದೆ . 10 ರೂ. ಗೆ ಉಪಹಾರ ಹಾಗೂ 10 ರೂ.ಗೆ ಊಟ ನೀಡಲಾಗುತ್ತಿದೆ .
ಆ್ಯಪ್ನಲ್ಲಿ ವೀಕ್ಷಿಸಿ x