ಬಳ್ಳಾರಿ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Bellary loksabha election 2019 Live updates

[$--lok#2019#state#karnataka--$]
ಗಣಿ ನಾಡು ಬಳ್ಳಾರಿಯಲ್ಲಿ(ಪರಿಶಿಷ್ಟ ಪಂಗಡ) ಕೈ-ಕಮಲ ನಡುವೆ ನೇರ ಕುಸ್ತಿ. 2019ರ ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ಹಾಗೂ ಬಿಜೆಪಿಯ ವೈ.ದೇವೇಂದ್ರಪ್ಪ ನಡುವೆ ನೇರ ಸ್ಪರ್ಧೆ ಇದೆ. 
 
2018ರ ಉಪಚುನಾವಣೆಯಲ್ಲಿ ಮೈತ್ರಿ ಸರಕಾರದ ಬೆಂಬಲದಿಂದ ಉಗ್ರಪ್ಪ 2,43,161 ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದರು. ಜೆ.ಶಾಂತಾ ಬಿಜೆಪಿಯಿಂದ ಪರಾಭವಗೊಂಡಿದ್ದರು. 
 
ಈ ಬಾರಿ ಕಾಂಗ್ರೆಸ್ ನ ಉಗ್ರಪ್ಪ ವಿರುದ್ಧ ಟಿಕೆಟ್ ಗಾಗಿಯೇ ಬಿಜೆಪಿ ಸೇರಿದ್ದ ಶಾಸಕ ನಾಗೇಂದ್ರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಗಿಂತ ಹೆಚ್ಚು ಪ್ರಭಾವ ಬಳಸಿ ಬಿಜೆಪಿ ಟಿಕೆಟ್ ಪಡೆದು ವೈ.ದೇವೇಂದ್ರಪ್ಪ ಕಣದಲ್ಲಿದ್ದಾರೆ. 
 
ರೆಡ್ಡಿಗಳ ಪ್ರಾಬಲ್ಯದ ನಡುವೆಯೂ ಉಪ ಚುನಾವಣೆಯಲ್ಲಿ ಕೈ ಪಡೆ ವಿಜಯದ ನಗೆ ಬೀರಿತ್ತು. ಕಳೆದೆರಡು ದಶಕಗಳ ಹಿಂದೆ ಬಿಜೆಪಿ ಭದ್ರಕೋಟೆಯಂತಿದ್ದ ಗಣಿನಾಡು ಈಗ ಕೈ ವಶವಾಗುತ್ತಿದೆ. 
[$--lok#2019#constituency#karnataka--$]
ಒಟ್ಟು 21,36,861 ರಲ್ಲಿ 10,66,503 ಪುರುಷರು, 10,70,080 ಮಹಿಳೆಯರು ಹಾಗೂ 278 ಇತರೆ ಮತದಾರರು ಇಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ