ನಂಬಿಸಿ ವಿಧವೆಗೆ 12 ಲಕ್ಷ ವಂಚಿಸಿದ 56ರ ವ್ಯಕ್ತಿ!

ಮಂಗಳವಾರ, 21 ಮಾರ್ಚ್ 2023 (11:02 IST)
ಗಾಂಧಿನಗರ : ಮದುವೆಯಾಗುವುದಾಗಿ ನಂಬಿಸಿ 56 ವರ್ಷದ ವ್ಯಕ್ತಿಯೊಬ್ಬ ವಿಧವೆಗೆ 12 ಲಕ್ಷ ವಂಚಿಸಿದ ಘಟನೆ ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಮಹೇಶ್ ಗೋಸಾಯಿ ಎಂದು ಗುರುತಿಸಲಾಗಿದೆ.
 
ಈತ ಮೊರ್ಬಿಯ ಅಮ್ರಾನ್ ಗ್ರಾಮದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾನೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಇನ್ಸ್ಟಾಗ್ರಾಂ ಮೂಲಕ ಮಹಿಳೆಗೆ ಗೋಸಾಯಿಯ ಪರಿಚಯವಾಗಿದೆ. ಈ ವೇಳೆ ಆರೋಪಿ ತಾನು ಲಂಡನ್ಗೆ ಶಿಫ್ಟ್ ಆಗುವುದಾಗಿ ಹೇಳಿದ್ದಾನೆ. ಅಲ್ಲದೆ ಇದೇ ವೇಳೆ ಮದುವೆಯಾಗುತ್ತೇನೆ. ಮುಂದೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆಯನ್ನೂ ನೀಡಿದ್ದಾನೆ.

ವೀಸಾ ಶುಲ್ಕ ಮತ್ತು ಇತರ ಔಪಚಾರಿಕತೆಗಳ ನೆಪದಲ್ಲಿ ಹಣ ಕೊಡುವಂತೆ ಆರೋಪಿ ಕೇಳಿದ್ದಾನೆ. ಮಹಿಳೆ ಕೂಡ ಆರೋಪಿ ಮಾತು ನಂಬಿ ಮೊದಲು 5 ಲಕ್ಷ ರೂ. ಹಣ ಕಳುಹಿಸಿದ್ದಾಳೆ. ಗೋಸಾಯಿ ಅವರು ಮೊದಲು ಕೆನಡಾಕ್ಕೆ ಹೋಗಿ ನಂತರ ಲಂಡನ್ಗೆ ಹೋಗುವುದಾಗಿ ಸಂತ್ರಸ್ತೆಗೆ ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ