ಎರಡು ಪದಕದೊಂದಿಗೆ ತಾಯ್ನಾಡಿಗೆ ಮರಳಿದ ಮನು ಭಾಕರ್‌ಗೆ ಭವ್ಯ ಸ್ವಾಗತ

Sampriya

ಬುಧವಾರ, 7 ಆಗಸ್ಟ್ 2024 (19:04 IST)
Photo Courtesy X
ನವದೆಹಲಿ: ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಎರಡು ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಸ್ಟಾರ್ ಶೂಟರ್ ಮನು ಭಾಕರ್‌ಗೆ ಇಂದು ತಾಯ್ನಾಡಿನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ಸ್ವಾತಂತ್ರ್ಯ ನಂತರ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಮನು ಅವರು ಪಾತ್ರರಾಗಿದ್ದಾರೆ.

ಪ್ಯಾರಿಸ್‌ನಿಂದ  ಏರ್ ಇಂಡಿಯಾ ವಿಮಾನದ ಮೂಲಕ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮನು ಅವರಿಗೆ ಭವ್ಯ ಸ್ವಾಗತಕೋರಲಾಯಿತು.

ಈ ವೇಳೆ ಅವರ ಪೋಷಕರಾದ  ರಾಮ್ ಕಿಶನ್ ಮತ್ತು ಸುಮೇಧಾ, ಕ್ರೀಡಾ ಪ್ರೇಮಿಗಳು, ವೈಯಕ್ತಿಕ ತರಬೇತುದಾರ ಜಸ್ಪಾಲ್ ರಾಣಾ, ರಾಜ್ಯದ ನಾಯಕರು ಮತ್ತು ಕ್ರೀಡಾ ಪ್ರೇಮಿಗಳು ಅವರನ್ನು ಸ್ವಾಗತಿಸಿದರು.  ಈ ವೇಳೆ ಮನು ಭಾಕರ್ ಮೇಲೆ ಹೂವಿನ ಸುರಿಮಳೆ ಸುರಿಯಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ