ಆಧಾರ್ ಕಾರ್ಡ್ ಗಿಂತಲೂ ಸೂಪರ್ ಪವರ್ ಇರುವ ಐಡೆಂಟಿಟಿ ಕಾರ್ಡ್ ಬರಲಿದೆ!
ನವದೆಹಲಿಯಲ್ಲಿ ಜನಗಣತಿ ಆಯುಕ್ತರ ಕಚೇರಿ ಉದ್ಘಾಟನೆ ವೇಳೆ ಮಾತನಾಡುತ್ತಿರುವಾಗ ಅಮಿತ್ ಶಾ 2021 ರ ಜನಗಣತಿಯು ಮೊಬೈಲ್ ಆಪ್ ಆಧಾರಿತವಾಗಿರುತ್ತದೆ ಎಂದರು. ಅಲ್ಲದೆ, ದೇಶಕ್ಕೊಂದೇ ಕಾರ್ಡ್ ಸೇವೆ ನೀಡುವುದು ಇದರಿಂದ ಸುಲಭವಾಗುತ್ತದೆ ಎಂದಿದ್ದಾರೆ. ಈ ಮೂಲಕ ಮುಂದೊಂದು ದಿನ ದೇಶಕ್ಕೊಂದೇ ಕಾರ್ಡ್ ವ್ಯವಸ್ಥೆ ಜಾರಿಗೊಳಿಸುವುದರ ಬಗ್ಗೆ ಸುಳಿವು ನೀಡಿದ್ದಾರೆ.