ಹಸುಗಳನ್ನಪ್ಪಿಕೊಳ್ಳೊ ದಿನ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ

ಗುರುವಾರ, 9 ಫೆಬ್ರವರಿ 2023 (09:13 IST)
ನವದೆಹಲಿ : ಫೆಬ್ರವರಿ 14 ದಿನಾಂಕ ಹೇಳಿದ ತಕ್ಷಣ ಅದು ಪ್ರೇಮಿಗಳ ದಿನ ಎಂಬುದು ಪ್ರತಿಯೊಬ್ಬರಿಗೂ ನೆನಪಾಗುತ್ತದೆ.

ಈ ನಡುವೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಒಂದು ಹೊಸ ನೋಟಿಸ್ ಅನ್ನು ಬಿಡುಗಡೆ ಮಾಡಿದೆ. ಈ ದಿನ ದನಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಿ ಎಂದು ಕರೆ ನೀಡಿದೆ.

ಹೌದು, ಫೆಬ್ರವರಿ 14ರಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಿದರೆ, ಭಾರತದಲ್ಲಿ ದನವನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ಮಂಡಳಿ ಕರೆ ನೀಡಿದೆ.

ಈ ಮೂಲಕ ಹಸುಗಳನ್ನು ಹೊಂದುವುದರಿಂದಾಗುವ ಅನುಕೂಲ, ಅದು ರಾಷ್ಟ್ರದ ಆರ್ಥಿಕತೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ತಿಳಿಸಲು ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ