6 ದೇಶಗಳನ್ನು ಆಹ್ವಾನಿಸಲು ನಿರ್ಧರಿಸಿದ ಬ್ರಿಕ್ಸ್ ; ನರೇಂದ್ರ ಮೋದಿ

ಶುಕ್ರವಾರ, 25 ಆಗಸ್ಟ್ 2023 (12:39 IST)
ದೆಹಲಿ : ಬ್ರಿಕ್ಸ್ ಗುಂಪು ಗುರುವಾರ ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಗುಂಪಿನ ಸದಸ್ಯರಾಗಲು ಆಹ್ವಾನಿಸಿದೆ.
 
17 ವರ್ಷದಿಂದ ಇರುವ ಈ ಗುಂಪಿನ ನಾಯಕರು ತತ್ವಗಳು ಮತ್ತು ಮಾನದಂಡಗಳನ್ನು ಒಪ್ಪಿಕೊಂಡ ನಂತರ ಈ ವಿಸ್ತರಣೆ ಆಗಲಿದೆ. 2010 ರಿಂದ ದಕ್ಷಿಣ ಆಫ್ರಿಕಾವು ಬ್ರಿಕ್ಸ್ನ ಐದನೇ ಸದಸ್ಯರಾದ ನಂತರ ಇದು ಗುಂಪಿನ ಮೊದಲ ವಿಸ್ತರಣೆಯಾಗಿದೆ.

ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ಗುಂಪಿನ ಪ್ರಸ್ತುತ ಅಧ್ಯಕ್ಷರಾದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಬ್ರೆಜಿಲ್, ಭಾರತ ಮತ್ತು ಚೀನಾದ ನಾಯಕರು ಉಪಸ್ಥಿತರಿದ್ದ ಸುದ್ದಿಗೋಷ್ಠಿಯಲ್ಲಿ ವಿಸ್ತರಣೆಯನ್ನು ಘೋಷಿಸಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಇದರಲ್ಲಿ ಭಾಗಿಯಾಗಿದ್ದಾರೆ.

ಬ್ರಿಕ್ಸ್ ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಯನ್ನು ಪೂರ್ಣ ಸದಸ್ಯರಾಗಲು ಆಹ್ವಾನಿಸುತ್ತಿದೆ ಎಂದು ರಾಮಾಫೋಸಾ ಹೇಳಿದರು. ಅವರ ಸದಸ್ಯತ್ವವು ಜನವರಿ 1, 2024 ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ಬ್ರಿಕ್ಸ್ ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿರುವ ದೇಶಗಳ ಸಮಾನ ಪಾಲುದಾರಿಕೆಯಾಗಿದೆ. ಗುಂಪುಗಳ ವಿಸ್ತರಣೆಗೆ ಮಾರ್ಗದರ್ಶಿ ತತ್ವಗಳು ಮತ್ತು ಮಾನದಂಡಗಳ ಮೇಲೆ ಸದಸ್ಯರು ಒಮ್ಮತ ಸೂಚಿಸಿದ್ದಾರೆ. ಮೊದಲ ಹಂತದ ವಿಸ್ತರಣೆ ಬಗ್ಗೆಯೂ ಒಮ್ಮತ ಮೂಡಿದ್ದು, ಮುಂದಿನ ಹಂತಗಳಲ್ಲಿ ಸದಸ್ಯರು ಕೆಲಸ ಮಾಡಲಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ