ಜಾಮೀನು ಸಿಕ್ಕ ಸಂತಸದಲ್ಲಿರುವಾಗಲೇ ದರ್ಶನ್ ಗೆ ಮತ್ತೊಂದು ಸಂಕಷ್ಟ

Krishnaveni K

ಮಂಗಳವಾರ, 17 ಡಿಸೆಂಬರ್ 2024 (15:54 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದ ಬೆನ್ನಲ್ಲೇ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗುವ ಸೂಚನೆಯಿದೆ. ಪ್ರಕರಣ ಸಂಬಂಧ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಅರೋಪಿಗಳು ಬೇಲ್ ಪಡೆದು ಹೊರಬಂದಿದ್ದಾರೆ. ಆದರೆ ಇದೀಗ ಪೊಲೀಸರು ಹೈಕೊರ್ಟ್ ನೀಡಿರುವ ರೆಗ್ಯುಲರ್ ಬೇಲ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಈ ಬಗ್ಗೆ ಸ್ವತಃ ಪೊಲೀಸ್ ಕಮಿಷನರ್ ಬಿ ದಯಾನಮದ್ ಮಾಹಿತಿ ನೀಡಿದ್ದಾರೆ. ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ.  ಕಾಗದ ಪತ್ರಗಳು ರೆಡಿಯಾದ ತಕ್ಷಣ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಕಮಿಷನರ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಬೇಕಾದರೆ ಚಾರ್ಜ್ ಶೀಟ್ ನ್ನು ಕನ್ನಡದಿಂದ ಇಂಗ್ಲಿಷ್ ಗೆ ಭಾಷಾಂತರಿಸಬೇಕಿತ್ತು. ಆ ಪ್ರಕ್ರಿಯೆ ಈಗ ಮುಗಿದಿದೆ. ಇನ್ನೇನು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಲಿದೆ. ಸದ್ಯಕ್ಕೆ ಜಾಮೀನು ಪಡೆದು ನಿರಾಳರಾಗಿರುವ ದರ್ಶನ್ ಗೆ ಇದು ಸಂಕಷ್ಟ ತಂದೊಡ್ಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ