ನವದೆಹಲಿ: ಇಂದು ನಡೆದ ದೆಹಲಿ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶಗಳು ಹೊರಬೀಳುತ್ತಿವೆ. ಈ ಪ್ರಕಾರ ಈ ಬಾರಿ ದೆಹಲಿ ಗದ್ದುಗೆ ಯಾರದ್ದು ನೋಡಿ.
ಈ ಬಾರಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಭಿನ್ನಾಭಿಪ್ರಾಯವಾಗಿದ್ದು ಹೆಚ್ಚು ಹೊಡೆತ ಬಿದ್ದಿರುವುದು ಕಾಂಗ್ರೆಸ್ ಗೇ ಎನ್ನಬಹುದು. ಹೀಗಾಗಿ ಎಎಪಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿತ್ತು.
ಮತದಾನ ಪ್ರಕ್ರಿಯೆ ಮುಕ್ತಾಯದ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಭಾರೀ ಚರ್ಚೆಗಳು ಶುರುವಾಗಿದೆ. ಆ ಪ್ರಕಾರ ಈ ಬಾರಿ ಬಿಜೆಪಿ ಮತ್ತು ಎಎಪಿ ನಡುವೆ ತೀವ್ರ ಪೈಪೋಟಿಯಿದೆ ಎನ್ನಲಾಗುತ್ತಿದೆ.
ಕೆಲವೊಂದು ಸಮೀಕ್ಷೆಗಳ ಪ್ರಕಾರ ದೆಹಲಿಯಲ್ಲಿ ಮೋದಿ ಮ್ಯಾಜಿಕ್ ಕೆಲಸ ಮಾಡಲಿದ್ದು, ಬಿಜೆಪಿ ಅಧಿಕಾರಕ್ಕೇರಲಿದೆ ಎನ್ನಲಾಗುತ್ತಿದೆ. ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಸಾಧಿಸಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಆದರೆ ಕೆಲವು ಸಮೀಕ್ಷೆಗಳ ಪ್ರಕಾರ ಎಎಪಿ ಮತ್ತೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ ಎನ್ನುತ್ತಿದೆ. ಹೀಗಾಗಿ ಈ ಎರಡು ಪಕ್ಷಗಳ ಪೈಕಿ ಒಂದು ಗೆಲುವು ಸಾಧಿಸುವುದು ಖಚಿತ ಎನ್ನಲಾಗಿದೆ.