5ಜಿ ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

ಸೋಮವಾರ, 25 ಜುಲೈ 2022 (16:00 IST)
ನವದೆಹಲಿ : ಭಾರತದ ಅತೀ ದೊಡ್ಡ 5ಜಿ ಸ್ಪೆಕ್ಟ್ರಂ ಹರಾಜು ಮಂಗಳವಾರದಿಂದ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಕ್ಷಣಗಣನೆ ನಡೆಯುತ್ತಿದೆ.

ಟೆಲಿಕಾಂ ಕಂಪನಿಗಳು ಈ ಹರಾಜಿನಲ್ಲಿ ಭಾಗವಹಿಸಲು ತಯಾರಾಗಿ ನಿಂತಿವೆ. ಆದರೆ ಈ 5ಜಿ ಯುಗದ ಉಪಯೋಗವೆಷ್ಟು ಎಂಬ ಬಗ್ಗೆ ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರ ತಿಳಿದುಕೊಳ್ಳುವುದು ಅತ್ಯಗತ್ಯ.

ಸರ್ಕಾರ ಹಾಗೂ ವಿವಿಧ ಉದ್ಯಮಗಳ ಪ್ರಕಾರ 5ಜಿ ನೆಟ್ವರ್ಕ್ ಕಳೆದ 4ಜಿ ನೆಟ್ವರ್ಕ್ಗಿಂತಲೂ 10 ಪಟ್ಟು ಹಾಗೂ 3ಜಿ ಗಿಂತಲೂ 30 ಪಟ್ಟು ಹೆಚ್ಚು ವೇಗವಾಗಿರುತ್ತದೆ. ಇದು ಇಲ್ಲಿಯವರೆಗೆ ಯಾವುದೇ ನೆಟ್ವರ್ಕ್ ನೀಡದ ಹಾಗೂ ಸಮಯ ವ್ಯರ್ಥವಾಗಿಸದ ಅತ್ಯುತ್ತಮ ಅನುಭವ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ