ಪತ್ನಿಯ ಶೀಲ ಶಂಕಿಸಿದ ಪತಿ ಮಾಡಿದ್ದೇನು ಗೊತ್ತಾ…?

ಶನಿವಾರ, 17 ಫೆಬ್ರವರಿ 2018 (13:08 IST)
ಕರೀಂನಗರ : ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ಕೊಂದ ಘಟನೆ ಕರೀಂ ನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ರೊಂಟಾಲಾ ಶೈಲಜಾ ಅಲಿಯಾಸ್‌ ಮಾಧವಿ (35) ಅವರಿಗೆ ಜಯಂತ್‌ ಕುಮಾರ್‌ ಜತೆಗೆ ಮದುವೆಯಾಗಿತ್ತು. ಈ ದಂಪತಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.

 
ಇತ್ತೀಚೆಗೆ ಕೆಲ ತಿಂಗಳಿಂದ ಜಯಂತ್‌ ಕುಮಾರ್‌, ಪತ್ನಿಯ ಶೀಲವನ್ನು ಶಂಕಿಸಲು ಆರಂಭಿಸಿದ್ದ. ನಿನ್ನೆ ಶುಕ್ರವಾರ ಜಯಂತ್‌ ಕುಮಾರ್‌ ಪೆಡ್ಡ ಪಾಪಯ್ಯ ಗ್ರಾಮದಲ್ಲಿನ ತನ್ನ ಹೊಲಕ್ಕೆ ಬಂದಿದ್ದಾಗ ಅಲ್ಲಿ ಕೆಲಸ ಮಾಡಲು ಪತ್ನಿ ಮಾಧವಿಯೂ ಬಂದಿದ್ದಳು. ಆ ಸಂದರ್ಭದಲ್ಲಿ ಜಯಂತ್‌ ಕುಮಾರ್‌ ಪತ್ನಿಯನ್ನು ಹರಿತವಾದ ಆಯುಧದಿಂದ ಇರಿದು ಕೊಂದ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 


ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ನಾಪತ್ತೆ ಆಗಿರುವ ಜಯಂತ್‌ ಕುಮಾರ್‌ ನನ್ನು ಹುಡುಕುತ್ತಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ