ನವದೆಹಲಿ: ಕಳೆದ ವರ್ಷ ಮೋದಿ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಅನ್ನ ಯೋಜನೆಯನ್ನು ಈ ಅವಧಿಯಲ್ಲೂ ಮುಂದುವರಿಸುವುದಾಗಿ ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 5 ಕೆಜಿ ಉಚಿತ ಪಡಿತರ ಸಿಗಲಿದೆ.
ಹಾಗಿದ್ದರೆ ಈ ಯೋಜನೆಗೆ ಯಾರು ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ. ಅನ್ನ ಯೋಜನೆಯಡಿ ಸುಮಾರು 80 ಕೋಟಿ ಜನತೆಗೆ ಪ್ರಯೋಜನವಾಗಿದೆ. ಇಷ್ಟು ಜನ ಬಡತನದಿಂದ ಮೇಲೇಳಲು ಸಾಧ್ಯವಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಯೋಜನೆಗೆ ಯಾರು ಅರ್ಹರು?
ವಿಧವೆಯರು ಮುಖ್ಯಸ್ಥರಾಗಿರುವ ಕುಟುಂಬ ಅಥವಾ 60 ವರ್ಷ ಮೇಲ್ಪಟ್ಟ ದುಡಿಯಲು ಸಾಧ್ಯವಾಗದ ಅಥವಾ ಅನಾರೋಗ್ಯಕ್ಕೀಡಾದ ಬಡ ಕುಟುಂಬಗಳಿಗೆ ಈ ಯೋಜನೆ ಅನ್ವಯವಾಗುತ್ತದೆ
ಇದನ್ನು ಆಯಾ ಸ್ಥಳೀಯಾಡಳಿತವೇ ತೀರ್ಮಾನಿಸುತ್ತದೆ.
ಎಲ್ಲಾ ಬುಡಕಟ್ಟು ಜನಾಂಗದವರಿಗೆ ಈ ಯೋಜನೆ ಸಿಗಲಿದೆ
ಬಡ ಕೂಲಿ ಕಾರ್ಮಿಕರು, ಸ್ವಂತ ಜಮೀನಿಲ್ಲದೇ ಇನ್ನೊಬ್ಬರ ಜಮೀನಿನಲ್ಲಿ ದುಡಿಯುವ ಕೃಷಿಕರು, ಕುಶಲ ಕರ್ಮಿಗಳು, ನೇಕಾರರು, ಕಮ್ಮಾರರು, ಬಡಗಿಗಳು, ದಿನಗೂಲಿ ನೌಕರರು ಈ ಯೋಜನೆಗೆ ಅರ್ಹರು.
ಎಚ್ಐವಿ ಸೋಂಕಿತ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಬೇಕಾಗುತ್ತದೆ. ನಿಮ್ಮ ಪಕ್ಕದ ನ್ಯಾಯ ಬೆಲೆ ಅಂಗಡಿಗೆ ತೆರಳಿ ಅರ್ಜಿ ಸಲ್ಲಿಸಬಹುದು.