ಜಲ್ಲಿಕಟ್ಟು ಸ್ಪರ್ಧೆ : ಓರ್ವ ಸಾವು, ಆರು ಮಂದಿಗೆ ಗಂಭೀರ ಗಾಯ

ಗುರುವಾರ, 23 ಫೆಬ್ರವರಿ 2023 (13:26 IST)
ಆನೆಕಲ್ : ಜಲ್ಲಿಕಟ್ಟು ಆಚರಣೆ ವೇಳೆ ಓರ್ವ ಸಾವನ್ನಪ್ಪಿ ಆರು ಮಂದಿ ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಕೆಲವರಪಲ್ಲಿ ಸಮೀಪದಲ್ಲಿ ಸಪ್ಲಮ್ಮ ದೇವಿ ಜಾತ್ರಾ ಅಂಗವಾಗಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಗೂಳಿಯೊಂದು ಜನರ ಮೇಲೆ ದಾಳಿ ನಡೆಸಿ, ಸೂಳಗಿರಿ ಸಮೀಪದ ಆರೋಪಲ್ಲಿ ಗ್ರಾಮದ ಮಂಜು (25) ಸಾವನ್ನಪ್ಪಿದ್ದಾರೆ.

ಗೂಳಿ ದಾಳಿಯಿಂದಾಗಿ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಪೊಂಗಲ್ ಹಬ್ಬದ ಬಳಿಕ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಈ ಸ್ಪರ್ಧೆಯನ್ನು ವೀಕ್ಷಿಸುವ ಸಲುವಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ.

ಈ ಸ್ಪರ್ಧೆಗೆ ಜನರು ಹೊಸೂರು, ಡೆಂಕಣಿಕೋಟೆ, ಥಳಿ, ಬಾಗಲೂರು ಸೇರಿದಂತೆ ಹಲವು ಕಡೆಗಳಿಂದ ಸುಮಾರು 500ಕ್ಕೂ ಹೆಚ್ಚು ಹೋರಿಗಳನ್ನು ಕರೆತರುತ್ತಾರೆ.

ತಮಿಳುನಾಡು ಅಲ್ಲದೇ ಕರ್ನಾಟಕ, ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳಿಂದ ಗೂಳಿಗಳು ಆಗಮಿಸುತ್ತವೆ. ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಗೆಜ್ಜೆಸರ, ಕೊಂಬಿಗೆ ಬಣ್ಣ ಬಣ್ಣದ ತಡಿಕೆಯಿಂದ ಸಿಂಗರಿಸುತ್ತಾರೆ.

ಸಿಂಗಾರದ ಜೊತೆಗೆ ನಶೆಯಲ್ಲಿ ಗೂಳಿಗಳು ಹದ್ದಿನಂತೆ ಮುನ್ನುಗುತ್ತವೆ. ಗೂಳಿಗಳ ಮುಡಿಗೆ ಕಟ್ಟುವ ಬಹುಮಾನಕ್ಕಾಗಿ ಅವುಗಳನ್ನು ಹಿಡಿಯಲು ಯುವಕರು ಹೋರಾಟವನ್ನು ನಡೆಸುತ್ತಾರೆ. ಈ ವೇಳೆ ಗೂಳಿಗಳು ದಾಳಿ ನಡೆಸಿ ಅನೇಕ ಸಾವು ನೋವುಗಳು ಸಂಭವಿಸುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ