ಇಂದು 82ನೇ ಪ್ರಧಾನಿ ‘ಮನ್ ಕೀ ಬಾತ್ ‘ಪೂರ್ಣ ಮಾಹಿತಿ ತಿಳಿಯಿರಿ
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು 82ನೇ ಆವೃತ್ತಿಯ ಮನ್ ಕೀ ಬಾತ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಅವರು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುವರು. ಸಾಮಾನ್ಯವಾಗಿ ಪ್ರತಿತಿಂಗಳ ಕೊನೇ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಇರುತ್ತದೆ. ಇದರಲ್ಲಿ ಅವರು ರಾಜಕೀಯ ಹೊರತಾದ ಮಾತುಗಳನ್ನು ಆಡುತ್ತಾರೆ. ಸಾಧಕರನ್ನು ಶ್ಲಾಘಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಆಲ್ ಇಂಡಿಯಾ ರೇಡಿಯೋದ ಎಲ್ಲ ನೆಟ್ವರ್ಕ್ಗಳಲ್ಲಿ, ದೂರದರ್ಶನ, ಎಐಆರ್ ನ್ಯೂಸ್ ಮತ್ತು ಅವುಗಳ ಮೊಬೈಲ್ ಆ್ಯಪ್ಗಳಲ್ಲಿ ಮನ್ ಕೀ ಬಾತ್ ವೀಕ್ಷಿಸಬಹುದು. ಅದರ ಹೊರತಾಗಿ ಬಿಜೆಪಿಯ ಯೂಟ್ಯೂಬ್ ಚಾನಲ್ಗಳು, ಪ್ರಧಾನಮಂತ್ರಿ ಕಚೇರಿಯ ಅಧಿಕೃತ ವೆಬ್ಸೈಟ್ಗಳಲ್ಲಿ ಪ್ರಸಾರವಾಗುತ್ತದೆ. ಇನ್ನು ಮನ್ ಕೀ ಬಾತ್ ಮೂಲ ಆವೃತ್ತಿ ಹಿಂದಿಯಲ್ಲಿ ಪ್ರಸಾರವಾಗಲಿದೆ. ಅಂದರೆ ನರೇಂದ್ರ ಮೋದಿ ಹಿಂದಿಯಲ್ಲಿ ಮಾತನಾಡಲಿದ್ದಾರೆ. ಅದಾದ ಬಳಿಕ ಆಲ್ ಇಂಡಿಯಾ ರೇಡಿಯೋ ಸಂಜೆ 8 ಗಂಟೆ ಹೊತ್ತಿಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಿದೆ.