Mallikarjun Kharge: ನಾವೆಲ್ಲಾ ಇರ್ತೀವಿ, ಹೋಗ್ತೀವಿ ದೇಶದ ಭದ್ರತೆ ಎಲ್ಲಕ್ಕಿಂತ ಮುಖ್ಯ: ಮಲ್ಲಿಕಾರ್ಜುನ ಖರ್ಗೆ

Krishnaveni K

ಭಾನುವಾರ, 27 ಏಪ್ರಿಲ್ 2025 (16:49 IST)
ನವದೆಹಲಿ: ನಾವು, ಮೋದಿ, ಅಮಿತ್ ಶಾ ಇಂದು ಇರ್ತೀವಿ, ನಾಳೆ ಹೋಗ್ತೀವಿ ಆದರೆ ದೇಶದ ಭದ್ರತೆ ಎಲ್ಲಕ್ಕಿಂತ ಮುಖ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಪಹಲ್ಗಾಮ್ ನಲ್ಲಿ ಧರ್ಮ ಕೇಳಿ ದಾಳಿ ಮಾಡಿದ್ರು. ಇದು ದುರದೃಷ್ಟಕರ. ಧರ್ಮ, ಜಾತಿ ಎಂದು ಹೇಳೋದು ಮುಖ್ಯ ಅಲ್ಲ ನಮಗೆ ದೇಶವೇ ಮೊದಲು ಎಂದಿದ್ದಾರೆ.

ಮೋದಿ ಇರ್ತಾರೆ ಹೋಗ್ತಾರೆ, ಅಮಿತ್ ಶಾ ಇರ್ತಾರೆ ಹೋಗ್ತಾರೆ, ನಾವು ಇರ್ತೀವಿ ಹೋಗ್ತೀವಿ. ಆದರೆ ಎಲ್ಲಕ್ಕಿಂತ ನಮಗೆ ದೇಶ ರಕ್ಷಣೆ  ಮುಖ್ಯ. ಇಂತಹ ಘಟನೆಗಳು ಮತ್ತೆ ನಡೆಯಬಾರದು ಎಂದಿದ್ದಾರೆ.

ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬೆಂಬಲ ಕೊಡ್ತೀವಿ ಎಂದು ಈಗಾಗಲೇ ಹೇಳಿದ್ದೇವೆ. ದೇಶಕ್ಕಾಗಿ ನಡೆಯುವ ಹೋರಾಟ ಎಂದರೆ ನಮ್ಮ ಪಕ್ಷದ ಬೆಂಬಲ ಇದ್ದೇ ಇರುತ್ತದೆ. ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ