Pehalgam: ಅಮಾಯಕರನ್ನು ಕೊಂದರೆ ಅಲ್ಲಾಹ್ ಕ್ಷಮಿಸಲ್ಲ: ನಾವು ದೇಶದ ಜೊತೆಗಿದ್ದೇವೆ ಎಂದು ಮುಸ್ಲಿಮರು

Krishnaveni K

ಸೋಮವಾರ, 28 ಏಪ್ರಿಲ್ 2025 (09:21 IST)
ನವದೆಹಲಿ: ಅಮಾಯಕರನ್ನು ಕೊಂದರೆ ಅಲ್ಲಾಹ್ ಕೂಡಾ ಕ್ಷಮಿಸಲ್ಲ.. ನಾವು ದೇಶದ ಜೊತೆಗಿದ್ದೇವೆ.. ಹೀಗಂತ ಮುಸ್ಲಿಮರು ಈಗ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ನೀಡುತ್ತಿದ್ದಾರೆ.

ಪಹಲ್ಗಾಮ್ ನಲ್ಲಿ ಉಗ್ರರು ಅಮಾಯಕ ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಇಡೀ ದೇಶದಲ್ಲೇ ಆಕ್ರೋಶವಿದೆ. ಕೆಲವರು ಮುಸ್ಲಿಂ ಧರ್ಮೀಯರ ಮೇಲೆಯೇ ಕಿಡಿ ಕಾರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಮುಸಲ್ಮಾನರೇ ಸೋಷಿಯಲ್ ಮೀಡಿಯಾದಲ್ಲಿ ನಾವು ದೇಶದ ಜೊತೆಗಿದ್ದೇವೆ ಎಂದು ಸಂದೇಶ ಸಾರಿದ್ದಾರೆ.

ಅಮಾಯಕರನ್ನು ಕೊಲ್ಲಬೇಕು, ಅನ್ಯ ಧರ್ಮೀಯರನ್ನು ಕೊಲ್ಲಬೇಕು ಎಂದು ಕುರಾನ್ ನಲ್ಲಿ ಹೇಳಿಲ್ಲ. ಅಮಾಯಕರನ್ನು ಕೊಂದರೆ ಅಲ್ಲಾಹ್ ಕೂಡಾ ಕ್ಷಮಿಸಲ್ಲ. ಹೀಗೆ ಮಾಡಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ ಎಂಬುದೆಲ್ಲಾ ತಪ್ಪು ಕಲ್ಪನೆ ಎಂದಿದ್ದಾರೆ.

ಮುಸ್ಲಿಂ ಧರ್ಮ ಎಂದಿಗೂ ಹಿಂಸೆಯನ್ನು ಪ್ರಚೋದಿಸಲ್ಲ. ಶಾಂತಿಯನ್ನು ಬಯಸುತ್ತದೆ, ಮಾನವೀಯತೆಯಲ್ಲಿ ನಂಬಿಕೆಯಿಟ್ಟಿದೆ. ಧರ್ಮದ ಹೆಸರು ಹೇಳಿಕೊಂಡು ಅಮಾಯಕರನ್ನು ಕೊಲೆ ಮಾಡಿದರೆ ಖಂಡಿತಾ ಸ್ವರ್ಗ ಸಿಗಲ್ಲ ಎಂದು ಮುಸ್ಲಿಮರೇ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಹೇಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ