ಪ್ರಧಾನಿ ಮೋದಿ ದೀಪ ಹಚ್ಚಲು ಹೇಳಿದರೆ ಕೆಲವರು ಇನ್ನೇನೋ ಮಾಡಿದರು!

ಸೋಮವಾರ, 6 ಏಪ್ರಿಲ್ 2020 (10:13 IST)
ಬೆಂಗಳೂರು: ಗಣಪತಿ ಮಾಡಲು ಹೇಳಿದರೆ ಅವನ ಅಪ್ಪನ ಮಾಡಿದರು ಎಂಬ ಮಾತಿನಂತೆ ಪ್ರಧಾನಿ ಮೋದಿ ದೀಪ ಹಚ್ಚಲು ಕರೆ ನೀಡಿದರೆ ಕೆಲವರು ಇನ್ನೇನೋ ಮಾಡಿದರು!


ನಿನ್ನೆ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪ ಆರಿಸಿ ಹಣತೆ, ಕ್ಯಾಂಡಲ್ ಅಥವಾ ಮೊಬೈಲ್ ಟಾರ್ಚ್ ಬೆಳಗಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದರೆ ಕೆಲವರು ಪಟಾಕಿ ಸಿಡಿಸಿ ದೀಪಾವಳಿಯೇನೋ ಎಂಬಂತೆ ಸಂಭ್ರಮಾಚರಣೆ ಮಾಡಿದ್ದಾರೆ!

ಬೆಂಗಳೂರು, ಚೆನ್ನೈ ಸೇರಿದಂತೆ ಕೆಲವು ನಗರ ಪ್ರದೇಶಗಳಲ್ಲಿ ಜನರು ದೀಪಾವಳಿ ಹಬ್ಬ ಆಚರಿಸುವಂತೆ ಪಟಾಕಿ ಸಿಡಿಸಿ ಅತಿರೇಕದ ವರ್ತನೆ ತೋರಿದ್ದಾರೆ. ಕಳೆದ ಬಾರಿಯೂ ಚಪ್ಪಾಳೆ ತಟ್ಟಲು ಹೇಳಿದರೆ ಬೀದಿಗೆ ಇಳಿದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಚಪ್ಪಾಳೆ ತಟ್ಟಿ ಕೆಲವರು ರಂಪ ಮಾಡಿದ್ದರು. ಇಂದೂ ಹಾಗೆಯೇ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ