ಕರೆನ್ಸಿ ನೋಟಲ್ಲಿ ಗಾಂಧಿ ಚಿತ್ರ ಮಾತ್ರ ಯಾಕೆ, ಅಂಬೇಡ್ಕರ್ ಫೋಟೋ ಇರಲಿ: ಪ್ರತಾಪ್ ಸಿಂಹ

Krishnaveni K

ಶನಿವಾರ, 21 ಡಿಸೆಂಬರ್ 2024 (12:30 IST)
ಬೆಂಗಳೂರು: ಕರೆನ್ಸಿ ನೋಟಲ್ಲಿ ಕೇವಲ ಗಾಂಧಿ ಚಿತ್ರ ಯಾಕೆ? ಅಂಬೇಡ್ಕರ್ ಫೋಟೋವೂ ಇರಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಸಂಸತ್ತಿನಲ್ಲಿ ವಿಪಕ್ಷಗಳನ್ನು ಟೀಕಿಸುವಾಗ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪ ಇಂಡಿಯಾ ಒಕ್ಕೂಟದ್ದಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

‘ಈ ದೇಶಕ್ಕೆ ಎಲ್ಲಾ ಧರ್ಮ, ಜಾತಿಯವರಿಗೆ ಆಯಾ ಧರ್ಮಗ್ರಂಥಗಳಿರುವಂತೆ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಸಂವಿಧಾನ. ಆ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಗೆ ನೀವೇನು ಗೌರವ ಕೊಟ್ರಿ? ನಮ್ಮ ಕರೆನ್ಸಿ ಮೇಲೆ ಗಾಂಧೀಜಿ ಫೋಟೋವಿದೆ. ಹಾಗೆ ನೋಡಿದರೆ ಅಂಬೇಡ್ಕರ್ ಚಿಂತನೆಗಳು ಅವರಿಗಿಂತಲೂ ಉತ್ತಮವಾಗಿತ್ತು.

ಅಂಥಾ ಅದ್ಭುತ ನಾಯಕನ ಫೋಟೋವನ್ನು ಕರೆನ್ಸಿ ಮೇಲೆ ಹಾಕಬೇಕಿತ್ತು. ಕೇವಲ ಗಾಂಧೀಜಿ ಫೋಟೋ ಮಾತ್ರ ಯಾಕೆ? ಆವತ್ತು ಅಂಬೇಡ್ಕರ್ ಸತ್ತಾಗ ದೆಹಲಿಯಲ್ಲಿ ಅವರನ್ನು ಮಣ್ಣು ಮಾಡಲು ಒಂದಿಂಚೂ ಜಾಗ ಕೊಡದೇ ಅವಮಾನಿಸಿದವರು ಇದೇ ಕಾಂಗ್ರೆಸ್ಸಿನವರು. ದೆಹಲಿಯಲ್ಲಿ ಸಂಜಯ್ ಗಾಂಧಿಗೆ, ರಾಜೀವ್ ಗಾಂಧಿಗೆ ನೂರಾರು ಎಕರೆ ಕೊಟ್ರಿ? ಅಂಬೇಡ್ಕರ್ ಅವರನ್ನು ಸಮಾಧಿ ಮಾಡಲು ಯಾಕೆ ಆವತ್ತು ದಾದರ್ ಗೆ ಕರೆತರಬೇಕಾಯಿತು? ಅಂಬೇಡ್ಕರ್ ಗೆ ನಿಜವಾದ ಗೌರವ ಕೊಟ್ಟವರು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು’ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ