ಮೋದಿ ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನ ಪುಸ್ತಕ ತೋರಿಸಿದ ರಾಹುಲ್ ಗಾಂಧಿ

Krishnaveni K

ಸೋಮವಾರ, 24 ಜೂನ್ 2024 (14:42 IST)
Photo Credit: X
ನವದೆಹಲಿ: ಲೋಕಸಭೆ ಕಲಾಪದ ಮೊದಲ ದಿನವೇ ರಾಹುಲ್ ಗಾಂಧಿ ತಮ್ಮ ಆಕ್ರಮಣಕಾರಿ ಧೋರಣೆ ತೋರಿದ್ದಾರೆ. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಲು ತೆರಳುವಾಗ ಸಂವಿಧಾನ ಪುಸ್ತಕ ಎತ್ತಿ ತೋರಿಸಿ ಅಣಕವಾಡಿದ್ದಾರೆ.

ಇಂದು ಮೋದಿ ನೂತನ ಸರ್ಕಾರದ ಮೊದಲ ಲೋಕಸಭೆ ಅಧಿವೇಶನವಾಗಿದೆ. ಮೊದಲ ದಿನ ನೂತನ ಸಂಸದರ ಪ್ರಮಾಣ ವಚನ ಕಾರ್ಯಕ್ರಮವಿತ್ತು. ಈ ವೇಳೆ ಮೊದಲನೆಯದಾಗಿ ಪ್ರಧಾನಿ ಮೋದಿಯನ್ನು ಪ್ರಮಾಣ ವಚನ ಸ್ವೀಕರಿಸಲು ಕರೆಯಲಾಯಿತು. ವಾರಣಾಸಿ ಕ್ಷೇತ್ರದಿಂದ ಆಯ್ಕೆಯಾದ ಮೋದಿ ಪ್ರಮಾಣ ವಚನ ಸ್ವೀಕರಿಸಲು ತೆರಳಿದ್ದಾರೆ.

ಈ ವೇಳೆ ರಾಹುಲ್ ಗಾಂಧಿ ತಮ್ಮ ಆಸನದಲ್ಲಿ ಕುಳಿತಲ್ಲಿಂದಲೇ ಸಂವಿಧಾನ ಪುಸ್ತಕವನ್ನು ಎತ್ತಿ ತೋರಿಸಿದ್ದಾರೆ. ಕಲಾಪ ಆರಂಭಕ್ಕೆ ಮುನ್ನ ಕಾಂಗ್ರೆಸ್ ಪ್ರಜಾಪ್ರಭುತ್ವ ಉಳಿಸಿ ಎಂದು ಪಾರ್ಲಿಮೆಂಟ್ ಬಳಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಎಲ್ಲಾ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸಂವಿಧಾನ ಹಿಡಿದು ಪ್ರತಿಭಟನೆ ನಡೆಸಿದ್ದರು.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ಸಂಸತ್ ನ ಒಳಗೂ ಮೋದಿ ವಿರುದ್ಧ ಸಂವಿಧಾನ ಪುಸ್ತಕ ಪ್ರದರ್ಶಿಸುವ ಮೂಲಕ ನಾವು ಪ್ರಜಾಪ್ರಭತ್ವ ಉಳಿಸಲು ಬಂದಿದ್ದೇವೆ ಎಂದು ರಾಹುಲ್ ಸೂಚನೆ ನೀಡಿದರು. ಆದರೆ ಮೋದಿ ರಾಹುಲ್ ಕಡೆ ಕಿಡಿ ನೋಟ ಬೀರಿ ತಮ್ಮ ಪಕ್ಷದವರತ್ತ ನೋಡಿ ನಸು ನಕ್ಕು ಕ್ಯಾರೇ ಎನ್ನದೇ ಪ್ರಮಾಣ ವಚನ ಸ್ವೀಕರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ