ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ

ಮಂಗಳವಾರ, 13 ಸೆಪ್ಟಂಬರ್ 2022 (16:24 IST)
ನವದೆಹಲಿ : ಒಂದು ಷರತ್ತನ್ನು ವಿಧಿಸಿದ ಭಾರತಕ್ಕೆ ಇನ್ನಷ್ಟು ರಿಯಾಯಿತಿ ದರದಲ್ಲಿ ತೈಲವನ್ನು ನೀಡಲು ನಾನು ಸಿದ್ಧ ಎಂದು ರಷ್ಯಾ ಹೇಳಿದೆ.
 
ರಷ್ಯಾ ಭಾರೀ ರಿಯಾಯಿತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತಕ್ಕೆ ನೀಡಲು ಮುಂದಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಭಾರತ ಜಿ7 ರಾಷ್ಟ್ರದ ಪ್ರಸ್ತಾಪಗಳನ್ನು ಬೆಂಬಲಿಸಬಾರದು ಎಂದು ರಷ್ಯಾ ಷರತ್ತು ವಿಧಿಸಿದೆ.

ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾದ ಮೇಲೆ ಯುರೋಪ್ ಮತ್ತು ಅಮೆರಿಕ ಹಲವು ಆರ್ಥಿಕ ನಿರ್ಬಂಧ ವಿಧಿಸಿದೆ. ಆರ್ಥಿಕ ನಿರ್ಬಂಧ ವಿಧಿಸಿದರೂ ರಷ್ಯಾ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರದ ಪರಿಣಾಮ ಜಿ7 ರಾಷ್ಟ್ರಗಳು ಮತ್ತೊಂದು ಆರ್ಥಿಕ ಸಮರಕ್ಕೆ ಮುಂದಾಗಿವೆ.

ರಷ್ಯಾದ ತೈಲ ಆಮದಿನ ಮೆಲೆ ಬೆಲೆ ಮಿತಿಯನ್ನು ಜಾರಿಗೊಳಿಸಲು ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಮುಂದಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ