ಜಾಗ್ವಾರ್ ಕಾರು ಕೇಳಿದರೆ ಬಿಎಂಡಬ್ಲ್ಯು ಕಾರು ಕೊಟ್ಟರೆಂದು ಈ ಪುತ್ರ ಮಹಾಶಯ ಮಾಡಿದ್ದೇನು ಗೊತ್ತಾ?!

ಶನಿವಾರ, 10 ಆಗಸ್ಟ್ 2019 (09:57 IST)
ಹರ್ಯಾಣ: ಇತ್ತೀಚೆಗಿನ ದಿನಗಳಲ್ಲಿ ಟೀನೇಜ್ ಹುಡುಗರು ಕಷ್ಟಪಡದೇ ವೈಭವದ ಬದುಕು ಬದುಕುವ ಕನಸು ಕಾಣುತ್ತಾರೆ. ಇದಕ್ಕಾಗಿ ಹೆತ್ತವರನ್ನು ಯಾವ ಮಟ್ಟಕ್ಕೆ ಬೇಕಾದರೂ ಗೋಳಾಡಿಸುತ್ತಾರೆ. ಅದಕ್ಕೆ ಇಲ್ಲೊಂದು ನಿದರ್ಶನ ಸಿಕ್ಕಿದೆ ನೋಡಿ.


ಹರ್ಯಾಣದ ಈ ಯುವಕನಿಗೆ ಪೋಷಕರು ಬಿಎಂಡಬ್ಲ್ಯು ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಆ ಯುವಕನಿಗೆ ಆ ಗಿಫ್ಟ್ ಇಷ್ಟವಾಗಿರಲಿಲ್ಲ. ಆತ ಜಾಗ್ವಾರ್ ಕಾರು ಬಯಸಿದ್ದನಂತೆ.

ಅದೇ ಕೋಪದಲ್ಲಿ ಹೊಸ ಬಿಎಂಡಬ್ಲ್ಯು ಕಾರನ್ನು ನದಿಯೊಂದಕ್ಕೆ ಎಸೆದು ಅದು ಮುಳುಗುವ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾನೆ! ಆದರೆ ಆ ಕಾರು ನದಿಯ ಕೆಸರಿನ ಮಧ್ಯೆ ಹೂತು ಹೋಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಯುವಕನ ಮೇಲೆ ಕೇಸ್ ಜಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ