ಚೀನಾ ವಿರುದ್ಧ ಕಠಿಣ ಕ್ರಮ : ರಿಷಿ ಸುನಕ್

ಸೋಮವಾರ, 25 ಜುಲೈ 2022 (12:09 IST)
ಲಂಡನ್ : ಬ್ರಿಟನ್ನ ಮುಂದಿನ ಪ್ರಧಾನಿಯಾದರೆ ಚೀನಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ ಹಾಗೂ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಭರವಸೆ ನೀಡಿದರು.

ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅವರ ಪ್ರತಿಸ್ಪರ್ಧಿ ಚೀನಾ, ರಷ್ಯಾ ವಿಚಾರದಲ್ಲಿ ರಿಷಿ ಸುನಕ್ ದುರ್ಬಲಾಗಿದ್ದಾರೆ ಎಂದು ಆರೋಪಿಸಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಏಷ್ಯಾದ ಸೂಪರ್ ಪವರ್ ದೇಶವು ದೇಶೀಯವಾಗಿ ಮತ್ತು ಜಾಗತಿಕ ಭದ್ರತೆಗೆ ನಂಬರ್ ಒನ್ ಬೆದರಿಕೆಯಾಗಿದೆ ಎಂದ ಅವರು, ಬ್ರಿಟನ್ನಲ್ಲಿರುವ ಎಲ್ಲಾ 30 ಚೀನಾದ ಸಂಸ್ಥೆಗಳನ್ನು ಮುಚ್ಚುತ್ತೇವೆ. ಇದರಿಂದಾಗಿ ಚೀನಿ ಸಂಸ್ಕೃತಿ ಹಾಗೂ ಭಾಷಾ ಪ್ರಭಾವ ಹರಡುವುದನ್ನು ತಡೆಯುತ್ತೇವೆ ಎಂದರು.

ಬ್ರಿಟನ್ನ ದೇಶೀಯ ಬೇಹುಗಾರಿಕೆ ಸಂಸ್ಥೆಯು ಚೀನೀ ಬೇಹುಗಾರಿಕೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಜೊತೆಗೆ ಸೈಬರ್ ಸ್ಪೇಸ್ನಲ್ಲಿ ಚೀನಾದ ಬೆದರಿಕೆಗಳನ್ನು ನಿಭಾಯಿಸಲು ನ್ಯಾಟೋ ಶೈಲಿಯ ಅಂತಾರಾಷ್ಟ್ರೀಯ ಸಹಕಾರವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ