ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ: ಎರಡು ದಿನಗಳಲ್ಲಿ ಆರು ಭಯೋತ್ಪಾದಕರ ಉಡೀಸ್‌

Sampriya

ಶುಕ್ರವಾರ, 16 ಮೇ 2025 (14:16 IST)
Photo Courtesy X
ಜಮ್ಮು: ಎರಡು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸಲಾದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಆರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರ ದಾಳಿಯದ ನಂತರ ಭದ್ರತಾ ಪಡೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಕಳೆದ 48 ಗಂಟೆಗಳಲ್ಲಿ ಕಾಶ್ಮೀರದಲ್ಲಿ ಆರು ಮಂದಿ ಪ್ರಮುಖ ಉಗ್ರರನ್ನು ಹೊಡೆದುರುಳಿಸಿದೆ.

ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಕುರಿತು ಮಾತನಾಡಿದ ಮೇಜರ್ ಜನರಲ್ ಧನಂಜಯ್ ಜೋಶಿ, ಮೇ 12 ರಂದು ಕೇಲಾರ್ನ ಎತ್ತರದ ಪ್ರದೇಶಗಳಲ್ಲಿ ಭಯೋತ್ಪಾದಕ ಗುಂಪಿನ ಉಪಸ್ಥಿತಿಯ ಬಗ್ಗೆ ಮಾಹಿತಿ ಬಂದಿತ್ತು ಎಂದು ಹೇಳಿದರು.

ಮೇ 13 ರ ಬೆಳಿಗ್ಗೆ ಕೆಲವು ಚಲನವಲನಗಳನ್ನು ಪತ್ತೆಹಚ್ಚಿದ ನಂತರ, ಅಧಿಕಾರಿಗಳು ಭಯೋತ್ಪಾದಕರಿಗೆ ಸವಾಲು ಹಾಕಿದರು, ಅವರು ಗುಂಡಿನ ದಾಳಿ ನಡೆಸಿದರು ಎಂದು ಅವರು ಹೇಳಿದರು.

ಸಿಆರ್‌ಪಿಎಫ್‌, ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಆಪರೇಷನ್‌ ಕೆಲ್ಲಾರ್‌ (ಶೋಪಿಯಾನ್‌) ಮತ್ತು ಆಪರೇಷನ್ ತ್ರಾಲ್ (ಪುಲ್ವಾಮಾ)ದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಆರು ಉಗ್ರರ ಹತ್ಯೆ ಮಾಡಲಾಗಿದೆ. ಇದು ಭದ್ರತಾ ಪಡೆಗಳ ನಡುವಿನ ನಿಕಟ ಸಮನ್ವಯದಿಂದ ಸಾಧ್ಯವಾಗಿದೆ ಎಂದು ಅವರು ವಿವರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ