ಕೊರೊನಾ ನಿಯಂತ್ರಣದಲ್ಲಿ ಸರ್ಕಾರದ ಸಾಧನೆ ಮಹತ್ತರವಾದುದು : ಗೆಹ್ಲೋಟ್

ಬುಧವಾರ, 26 ಜನವರಿ 2022 (12:16 IST)
ಬೆಂಗಳೂರು : ಕೊರೊನಾ 3ನೇ ಅಲೆ ನಡುವೆ ಇಂದು 73ನೇ ಗಣರಾಜ್ಯೋತ್ಸವ ಆಚರಣೆಯನ್ನು ಮಾಣಿಕ್ ಷಾ ಪೇರೇಡ್ ಗ್ರೌಂಡ್ ಸರಳವಾಗಿ ಆಚರಿಸಲಾಯಿತು.
 
ಕಾರ್ಯಕ್ರಮದಲ್ಲಿ ಘನವೆತ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು ರಾಜ್ಯ ಸರ್ಕಾರ ಸಾಧನೆಗಳನ್ನು ಭಾಷಣದ ಮೂಲಕ ವಿವರಿಸಿದರು.

ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಹೊಗಳಿದರು. ಜನರು ಕೊರೊನಾ ನಿಯಂತ್ರಣಕ್ಕೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಸೂತ್ರ ಅನುಸರಿಸುವಂತೆ ಕರೆ ನೀಡಿದರು. ತಮ್ಮ ಭಾಷಣದುದ್ದಕ್ಕೂ ಸರ್ಕಾರದ ಕಾರ್ಯಕ್ರಮಗಳ ವಿವರವನ್ನು ಜನತೆಯ ಮುಂದಿಟ್ಟರು.

ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು, ಗಣ್ಯರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ