ನಕಲಿ ಜಾಹೀರಾತುಗಳ ಹಾವಳಿ ವಿರುದ್ಧ ಕ್ರಮಕ್ಕೆ ವೆಂಕಯ್ಯನಾಯ್ಡು ಸೂಚನೆ

ಶನಿವಾರ, 30 ಡಿಸೆಂಬರ್ 2017 (19:05 IST)
ತೂಕ ಇಳಿಸುವ ಗುಳಿಗೆಗಳ ಜಾಹೀರಾತು ನಂಬಿ ಮೋಸಹೋಗಿರುವ ಅನುಭವ ಹಂಚಿಕೊಂಡಿರುವ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರರು ನಕಲಿ ಜಾಹೀರಾತುಗಳ ಹಾವಳಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
 
28 ದಿನಗಳಲ್ಲಿ ತೂಕ ಇಳಿಸುವ ಔಷಧವೊಂದರ ಜಾಹೀರಾತು ನನ್ನ ಗಮನಕ್ಕೆ ಬಂತು. ಈ ಬಗ್ಗೆ ವಿಚಾರಿಸಿದಾಗ ಸುಳ್ಳು ಎಂದು ಕೆಲವರು ಮಾಹಿತಿ ನೀಡಿದರು. ಬಳಿಕ ನಾನು ಜಾಹೀರಾತನ್ನು ಮತ್ತೊಮ್ಮೆ ಗಮನಿಸಿ ಅದರಂತೆ, 1,230 ರೂಪಾಯಿ ಹಣ ಪಾವತಿಸಿದೆ ಎಂದು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
 
ಆದರೆ ಗುಳಿಗೆಗಳ ಪ್ಯಾಕೆಟ್‌ ಬರುವ ಬದಲು, ಇನ್ನೂ 1000 ರೂಪಾಯಿ ನೀಡಿದರೆ ಒರಿಜಿನಲ್‌ ಔಷಧ ಕಳುಹಿಸುವುದಾಗಿ ತಿಳಿಸುವ ಪ್ಯಾಕೆಟ್‌ ನನ್ನ ಕೈಸೇರಿತು. ಈ ವಿಷಯವನ್ನು ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸಲಾಯಿತು. ತನಿಖೆಯ ಬಳಿಕ ಆ ಜಾಹೀರಾತಿನ ಮೂಲ ಅಮೆರಿಕದಲ್ಲಿರುವುದು ತಿಳಿದುಬಂತು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ