ಚೀನಾ-ಹಿಂದೆ ಟ್ರಂಪ್ ಅಧ್ಯಕ್ಷರಾಗಿದ್ದಾಗಲೂ ,ಒಬಾಮಾ ಅಧ್ಯಕ್ಷರಾಗಿದ್ದಾಗಲು,ಈಗ ಜೋ ಬೈಡೆನ್ ಅಧ್ಯಕ್ಷರಾದಾಗಲೂ ಭಾರತದ ಸ್ನೇಹ ಸಂಬAಧ ಬಲಗೊಳ್ಳುತ್ತಲೇ ಇದೆ. ವಿಶ್ವದ ದೊಡ್ಡಣನೊಂದಿಗೆ ಭಾರತದ ಬಾಂಧವ್ಯ ಗಟ್ಟಿಯಾಗುತ್ತಲೇ ಇರೋದನ್ನು ನೋಡಿ ಚೀನಾ ಅಸೂಯೆ ಪಡುವಂತಾಗಿದೆ. ಅದರಲ್ಲೂ ಸಿಕ್ಕಾ ಸಿಕ್ಕಾಗಲೆಲ್ಲ ಮೋದಿ ಮತ್ತು ಜೋ ಬೈಡೆನ್ ಭೇಟಿಯಾಗಿ ಮಾತುಕತೆ ನಡೆಸಿ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದೆಲ್ಲ ಚೀನಾಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿಯೇ ಚೀನಾ ,ಭಾರತದ ವಿರುದ್ಧ ಹೊಟ್ಟೆ ಉರಿ ಪಟ್ಟುಕೊಳ್ಳುತ್ತಿದೆ. ಏಷ್ಯಾದಲ್ಲಿ ತನ್ನ ಪ್ರಭಾವವನ್ನು ಭಾರತ ಕುಗ್ಗಿಸುತ್ತಿದೆ ಎಂಬ ಭಾವನೆ ,ಕೀಳರಿಮೆ ಚೀನಾದ್ದು. ಬಹುಷಃ ಇದಕ್ಕಾಗಿಯೇ ಭಾರತದ ಗಡಿ ಬಳಿ ಬಂದು ಆಗಾಗ ಕಿರಿ ಕಿರಿ ಉಂಟು ಮಾಡುತ್ತಿರಬಹುದು ಚೀನಾ.
ಗೊತ್ತಪ್ಪಾ ಗೊತ್ತು. ಚೀನಾದ ಬಳಿ ಬಲಾಢ್ಯ ಸೈನ್ಯವಿದೆ. ಅದರ ತಾಕತ್ತು ಪ್ರದರ್ಶಿಸುವ ಹುಮ್ಮಸ್ಸಿದೆ ಅಂತಾ. ಹಾಗಂತ ಅಕ್ಕ ಪಕ್ಕ ಇದ್ದ ದೇಶಗಳ ಗಡಿಗಳಲ್ಲಿ ಆಗಾಗ ತಂಟೆ ಮಾಡುತ್ತಲೇ ಇರಬೇಕೆಂಬ ನಿಯಮವೂ ಇಲ್ಲ, ಹಾಗೆ ಮಾಡಿದರೆ ಈಗ ತಿರುಗೇಟು ಕೊಡದೇ ಯಾರೂ ಇರೋದಿಲ್ಲ. ಭಾರತವಂತೂ ಚೀನಾಕ್ಕೆ ತಿರುಗೇಟು ಕೊಟ್ಟಿದೆ. ಆದರೆ, ಚೀನಾ ಆಗಾಗ ತಗಾದೆ ಮಾಡುತ್ತದೆ. ಕಾರಣ ತಾನೇ ಸೂಪರ್ ಪವರ್ ಎಂಬ ಅಹಂ. ಅಷ್ಟೇ ಅಲ್ಲ, ಭಾರತದ ಮೇಲೆ ವಿಶ್ವ ಸಮುದಾಯ ತೋರುತ್ತಿರುವ ವಿಶ್ವಾಸವೂ ಚೀನಾದ ಹೊಟ್ಟೆ ಉರಿಗೆ ಕಾರಣ. ಅದಕ್ಕಾಗಿಯೇ ಇಂತಹ ಗಡಿ ಉಲ್ಲಂಘನೆ ಮೂಲಕ ಕಾಲ್ಕೆರೆದು ಬರುತ್ತೇನೋ ಚೀನಾ..ಕೇಳಿದ್ರೆ ನಮ್ಮ ಸೈನಿಕರಿಗೆ ಗಡಿ ರೇಖೆ ಬಗ್ಗೆ ಪಕ್ಕಾ ತಿಳುವಳಿಕೆ ಇರಲಿಲ್ಲ ಅಂದು ಬಿಡುತ್ತೇನೋ ಚೀನಾ.
ಯಾವಾಗ ಗಾಲ್ವಾನ್ ನಲ್ಲಿ ಗಲಾಟೆಯಾಗಿ ಭಾರತ ಚೀನಾಕ್ಕೆ ತಿರುಗೇಟು ಕೊಟ್ಟಿತ್ತೋ ಆಗಿನಿಂದ ಚೀನಾ ಗಡಿಯಲ್ಲಿ ಮತ್ತಷ್ಟು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆಯಂತೆ. ವಿಪರೀತ ಚಳಿ, ಹಿಮ ಬೀಳುವ ಪ್ರದೇಶಗಳಲ್ಲದೆ, ಕಡಿದಾದ ಕಣಿವೆಗಳ ದುರ್ಗಮ ಪ್ರದೇಶಗಳಲ್ಲೂ ಚೀನಾ ಸೇನಾ ಕ್ಯಾಂಪ್ ಗಳು ಹೆಚ್ಚಾಗುತ್ತಿವೆ. ಅಷ್ಟೇ ಅಲ್ಲ, ಕ್ಷಿಪಣಿ ಉಡಾವಣಾ ವ್ಯವಸ್ಥೆಗಳನ್ನೂ ಕೂಡ ಹೆಚ್ಚಿಸಿಕೊಳ್ತಿದೆ ಚೀನಾ. ಭಾರತದ ಕಡೆಯಿಂದ ಯಾವುದೇ ತಗಾದೆಯೂ ಇಲ್ಲ, ತಂಟೆಯೂ ಇಲ್ಲ. ಆಕ್ರಮಣಕಾರಿ ಪ್ರವೃತ್ತಿಯೂ ಭಾರತದ್ದಲ್ಲ. ಹೀಗಿದ್ದಾಗ ಚೀನಾ ಯಾಕಿಷ್ಟು ಬಂದೋಬಸ್ತ್ ಮಾಡಿಕೊಳ್ತಾ ಇದೆ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ. ಅದಕ್ಕೆ ಉತ್ತರ ಸ್ಪಷ್ಟ. ಚೀನಾದ ವಾದವೇ ವಿಸ್ತರಣಾವಾದ, ಅದರ ಸ್ವಭಾವವೇ ಅಕ್ರಮಣಕಾರಿ.
ಚೀನಾದ ಸೇನೆ ಅಗಾಧ ಸಾಮರ್ಥ್ಯ ಹೊಂದಿರೋದು ಗೊತ್ತಿರೋ ವಿಚಾರ. ಹೀಗಾಗಿ ಚೀನಾ ಏನೇ ತಗಾದೆ ತೆಗೆದರೂ ಅದನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಭಾರತ ,ರಕ್ಷಣಾತ್ಮಕ ತಯಾರಿಯನ್ನು ಮಾಡಿಕೊಳ್ಳುತ್ತಲೇ ಇದೆ. ಚೀನಾಕ್ಕೂ ಇದು ಗೊತ್ತಿದೆ. ೬೦ರ ದಶಕದಲ್ಲಿ ಇದ್ದ ಭಾರತದ ಹಾಗೆ ಈಗಿನ ಭಾರತ ಇಲ್ಲ ಅನ್ನೋದು ಚೀನಾಕ್ಕೆ ಮನವರಿಕೆಯಾಗಿದೆ. ಹೀಗಾಗಿಯೇ ಚೀನಾ ಏಕಾ ಏಕಿ ಮೇಲೆ ಬೀಳಲ್ಲ. ಆದರೆ, ಪದೇ ಪದೇ ತಂಟೆ ಮಾಡುತ್ತದೆ. ಅಲ್ಲೆಲ್ಲೋ ಕ್ಯಾಂಪ್ ಗಳನ್ನು ಹೆಚ್ಚು ಮಾಡುತ್ತೆ. ಟಿಬೆಟ್ನ ಬೆಟ್ಟದ ಮೇಲೆ ವಾಯು ನೆಲೆ ಸ್ಥಾಪಿಸುತ್ತೆ. ಅಫ್ಘಾನಿಸ್ತಾನದ ಬಗ್ರಾಮ್ ಏರ್ ಬೇಸ್ ಮೇಲೆ ಕಣ್ಣು ಹಾಕುತ್ತೆ. ಶ್ರೀಲಂಕಾದಲ್ಲಿ ಬಂದರು ನಿರ್ಮಾಣ ಮಾಡುತ್ತೆ. ಒಟ್ಟಿನಲ್ಲಿ ಭಾರತದ ಸುತ್ತ ವ್ಯೂಹ ರಚನೆ ಮಾಡುತ್ತಲೇ ಇದೆ. ಆದರೆ, ಭಾರತ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಭವಿಷ್ಯದ ಬಗ್ಗೆ ಆಲೋಚನೆ ಮಾಡದೇ ಇರುತ್ತಾ.? ಅದೇನೇ ಇರಲೀ ಒಂದೊAದೇ ಏಟನ್ನು ಭಾರತ ಚೀನಾದ ವಿಚಾರದಲ್ಲಿ ಕೊಡುತ್ತಾ ಬಂದಿದೆ...?