ನವದೆಹಲಿ: ವಿಧವೆ ಹಾಗೂ ಆಕೆಯ ಪ್ರಿಯಕರನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಅವಮಾನಿಸಿದ ಘಟನೆ ಉದಯಪುರದಲ್ಲಿ ನಡೆದಿದೆ.
ವಿಧವೆ ಮಹಿಳೆ ಹಾಗೂ ಪ್ರಿಯಕರನ ಬಟ್ಟೆ ಬಿಚ್ಚಿಸಿ ವಿದ್ಯುತ್ ಕಂಬಕ್ಕೆ ಕಟ್ಟಿದ ಆರೋಪಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಘಟನೆಯನ್ನು ನೂರಾರು ಮಂದಿ ನೋಡುತ್ತಾ ನಿಂತಿದ್ದರೇ ಹೊರತು ಯಾರೂ ಇಬ್ಬರ ರಕ್ಷಣೆಗೆ ಬರಲಿಲ್ಲ. ಇದೀಗ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.