ಬಾದಾಮಿ ಚಿಕ್ಕಿ

ಶನಿವಾರ, 15 ನವೆಂಬರ್ 2014 (15:56 IST)
ಬೇಕಾಗುವ ಸಾಮಗ್ರಿ: 1/3 ಕಪ್ ತುರಿದ ಬೆಲ್ಲ, ಅರ್ಧ ಕಪ್ ಚಿತ್ತದಾಗಿ ಕತ್ತರಿಸಿದ ಬಾದಾಮಿ, ಕಾಲು ಕಪ್ ಎಳ್ಳು, ಒಂದುವರೆ ಕಪ್ ತುಪ್ಪ.
 
ಮಾಡುವ ವಿಧಾನ: ಒಂದು ಬಾಣಲೆ ತೆಗೆದುಕೊಂಡು ಅದನ್ನು ಸ್ವಲ್ಪ ಹೊತ್ತು ಬಿಸಿಯಾಗುವವರೆಗೆ ಒಲೆ ಮೇಲಿಡಿ. ಅದರಲ್ಲಿ ಎಳ್ಳು ಹಾಗಿ ಅದು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಅದನ್ನು ಒಲೆಯಿಂದ ಕೆಳಗಿಳಿಸಿ ಕಣಿಯಲು ಬಿಡಿ. ಇನ್ನೊಂದು ಪಾತ್ರೆಯಲ್ಲಿ ಚಿಕ್ಕದಾಗಿ ಕತ್ತರಿಸಿದ ಬಾದಾಮಿಯನ್ನು ಹುರಿದು ಪ್ರತ್ಯೇಕವಾಗಿಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ತುರಿದ ಬೆಲ್ಲ ಸೇರಿಸಿ ಅದು ಪೂರ್ತಿ ಕರಗುವವರೆಗೂ ಹಾಗೇ ಬಿಡಿ. ಈ ಪಾಕ ನೂಲಿನ ತರಹ ಅಂಟಾಗುತ್ತಿದ್ದಂತೆ ತಕ್ಷಣ ಒಲೆಯಿಂದ ಕೆಳಗಿಳಿಸಿ ಅದಕ್ಕೆ ಹುರಿದ ಎಳ್ಳು ಹಾಗೂ ಬಾದಾಮಿ ಸೇರಿಸಿ ಚೆನ್ನಾಗಿ ತಿರುವಿ. ಸರಿಯಾಗಿ ಮಿಕ್ಸ್ ಆದ ಮೇಲೆ ತುಪ್ಪ ಸವರಿದ ತಟ್ಟೆಯಲ್ಲಿ ಹರವಿ. ತಣ್ಣಗಾಗಲು ಬಿಟ್ಟು ಚೌಕಕಾರದಲ್ಲಿ ಕತ್ತರಿಸಿ.  

ವೆಬ್ದುನಿಯಾವನ್ನು ಓದಿ