ಅವಲಕ್ಕಿ ಉಂಡೆ

ಬುಧವಾರ, 10 ಅಕ್ಟೋಬರ್ 2018 (17:04 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* 1 ಕಪ್ ಗಟ್ಟಿ ಅವಲಕ್ಕಿ
* 1/4 ಕಪ್ ಪುಡಿ ಬೆಲ್ಲ
* 1/4 ಕಪ್ ಒಣಕೊಬ್ಬರಿ ತುರಿ
* 1/4 ಚಮಚ ಏಲಕ್ಕಿ ಪುಡಿ
* ಗೋಡಂಬಿ, ದ್ರಾಕ್ಷಿ, ಬಾದಾಮಿ ಸ್ವಲ್ಪ
* 5 ರಿಂದ 6 ಚಮಚ ತುಪ್ಪ
 
ತಯಾರಿಸುವ ವಿಧಾನ :
 
ಮೊದಲು ಅವಲಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಬೇಕು. ಅದು ಆರಿದ ನಂತರ ಅದನ್ನು ಪುಡಿ ಮಾಡಿಕೊಳ್ಳಿ ( ತೀರಾ ನುಣ್ಣಗೆ ಬೇಡ) ನಂತರ ಪುಡಿ ಮಾಡಿದ ಅವಲಕ್ಕಿಯ ಜೊತೆಗೆ ಬೆಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಆದರೆ ಮಧ್ಯದಲ್ಲಿ ಒಣಕೊಬ್ಬರಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಪುಡಿ ಮಾಡಬೇಕು. ನಂತರ ಇನ್ನೊಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಗೋಡಂಬಿ, ಬಾದಾಮಿ, ದ್ರಾಕ್ಷಿಯನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ಹಾಕಬೇಕು. ಈಗ ಎಲ್ಲವನ್ನೂ ಮಿಶ್ರಣ ಮಾಡಿ ಅದರಲ್ಲಿ ಬೇಕಾದ ಗಾತ್ರದಲ್ಲಿ ಉಂಡೆಯನ್ನು ಕಟ್ಟುತ್ತಾ ಬಂದರೆ ರುಚಿಯಾದ ಅವಲಕ್ಕಿ ಉಂಡೆ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ