ಓಟ್ಸ್ ಇಡ್ಲಿ

ಬುಧವಾರ, 10 ಅಕ್ಟೋಬರ್ 2018 (16:03 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* 1 ಕಪ್ ಓಟ್ಸ್
* 1/2 ಕಪ್ ಚಿರೋಟಿ ರವೆ
* 1 ಕಪ್ ಮೊಸರು
* 1/2 ಕಪ್ ಕ್ಯಾರೆಟ್ ತುರಿ
* 1/2 ಟೀ ಚಮಚ ಸಾಸಿವೆ
* 1/2 ಟೀ ಚಮಚ ಉದ್ದಿನಬೇಳೆ
* 1/2 ಟೀ ಚಮಚ ಕಡಲೇಬೇಳೆ
* 1/2 ಟೀ ಚಮಚ ಜೀರಿಗೆ
* 2 ಟೀ ಚಮಚ ಎಣ್ಣೆ ಅಥವಾ ತುಪ್ಪ
* ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು
* 1/2 ಟೀ ಚಮಚ ಸೋಡಾ
* ಸ್ವಲ್ಪ ಗೋಡಂಬಿ
 *ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
   ಒಂದು ಬಾಣಲೆಯಲ್ಲಿ ಓಟ್ಸ್ ಹಾಕಿ 2 ರಿಂದ 3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಬೇಕು. ಅದು ಆರಿದ ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಬಿಸಿ ಆದ ಮೇಲೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೇಬೇಳೆ, ಕರಿಬೇವು ಮತ್ತು ಕ್ಯಾರೆಟ್ ಹಾಕಿ ಹುರಿಯಬೇಕು. ಅದಕ್ಕೆ ಚಿರೋಟಿ ರವೆಯನ್ನು ಸೇರಿಸಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ಈ ಹುರಿದ ಪದಾರ್ಥಗಳು ಆರಿದ ನಂತರ ಓಟ್ಸ್, ಮೊಸರು, ಉಪ್ಪು, ನೀರು, ಕೊತ್ತಂಬರಿ ಸೊಪ್ಪು, ಸೋಡಾ, ಗೋಡಂಬಿ ಹಾಕಿ ಮಿಶ್ರಣ ಮಾಡಿ ಕಾಲು ಗಂಟೆ ಹಾಗೆಯೇ ಮುಚ್ಚಿಡಬೇಕು. ನಂತರ ಇಡ್ಲಿ ಕುಕ್ಕರಿನಲ್ಲಿ ಮುಚ್ಚಿ ಬೇಯಿಸಿದರೆ ರುಚಿಯಾದ ಬಿಸಿ ಬಿಸಿಯಾದ ಓಟ್ಸ್ ಇಡ್ಲಿ ತಿನ್ನಲು ಸಿದ್ಧ. ಇದರ ಜೊತೆಗೆ ಆಲೂಗಡ್ಡೆ ಸಾಗು ಮತ್ತು ತೆಂಗಿನಕಾಯಿ ಚಟ್ನಿ ತಿನ್ನಲು ರುಚಿಯಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ